ಸೈಬರ್ ಟ್ರೋಲ್ ವಿರುದ್ಧ ಸಿಡಿದೆದ್ದ ಯುಪಿಎಸ್ಸಿ ಟಾಪರ್!

Update: 2019-07-16 04:30 GMT

ಹೊಸದಿಲ್ಲಿ, ಜು.16: ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಸೈಬರ್ ಬೆದರಿಸುವಿಕೆಗೆ ಇಲ್ಲಿನ ಕೇಶ್ವಾಪುರಂ ವಲಯದ ಜಿಲ್ಲಾಧಿಕಾರಿ ಮತ್ತು ಯುಪಿಎಸ್ಸಿ ಟಾಪರ್ ಇರಾ ಸಿಂಘಲ್ ಗುರಿಯಾಗಿದ್ದು, ಈ ಅನಿಷ್ಟದ ವಿರುದ್ಧ ಸಿಡಿದೇಳುವ ಮೂಲಕ ಸುದ್ದಿಯಾಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್‌ಶಾಟ್ ಷೇರ್ ಮಾಡಿರುವ ಅವರು, ಭೂಪೇಶ್ ಜಸ್ವಾಲ್ ಎಂಬ ಅನುಯಾಯಿ, ಇವರನ್ನು ಸ್ಕೋಲಿಯೊಸಿಸ್ (ಜಗಳಗಂಟಿ) ಎಂಬ ಮಾನಸಿಕ ಕಾಯಿಲೆಯವಳು ಎಂದು ನಿಂದಿಸಿದ್ದನ್ನು ಬಹಿರಂಗಪಡಿಸಿದ್ದಾರೆ.

"ಜಗತ್ತಿನಲ್ಲೇ ಒಳ್ಳೆಯವರೇ ಇದ್ದಾರೆ; ಅಂಗವೈಕಲ್ಯದ ವ್ಯಕ್ತಿಗಳು ಏನನ್ನೂ ಎದುರಿಸುವುದಿಲ್ಲ ಎಂದು ಯಾರಾದರೂ ಭಾವಿಸಿದ್ದರೆ, ಅಂಥವರಿಗಾಗಿ ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೊಬ್ಬರು ನೀಡಿದ ಅಭಿಪ್ರಾಯವನ್ನು ಷೇರ್ ಮಾಡುತ್ತೇನೆ. ಇದು ಸೈಬರ್ ಬೆದರಿಸುವಿಕೆಯ ಒಂದು ಮುಖ" ಎಂದು ಸಿಂಘಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಆದರೆ ತಮಗೆ ಆಗಿರುವ ಕಿರುಕುಳದ ಅಂಶಕ್ಕೆ ಒತ್ತು ನೀಡುವ ಬದಲಾಗಿ ಅವರು, ಶಾಲಾ ಶಿಕ್ಷಣ ಹಂತದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಮತ್ತು ಸಂವೇದನೆಗೊಳಿಸುವ ಅಗತ್ಯವನ್ನು ಈ ಮೂಲಕ ಪ್ರತಿಪಾದಿಸಿದ್ದಾರೆ.

"ದುರದೃಷ್ಟವಶಾತ್ ಕೆಲವರು ಬೆದರದವರನ್ನು ಬೆದರಿಸುವ ಪ್ರಯತ್ನ ಮಾಡುತ್ತಾರೆ. ಈ ಕಾರಣದಿಂದ ಶಾಲೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆ ಇರಬೇಕು. ಈ ಕಾರಣದಿಂದ ನಮ್ಮ ಶಿಕ್ಷಣ ವ್ಯವಸ್ಥೆ, ಉತ್ತಮ ಮನುಷ್ಯರನ್ನು ರೂಪಿಸುವುದಕ್ಕೆ ಎಲ್ಲಕ್ಕಿಂತ ಹೆಚ್ಚಿನ ಗಮನ ನೀಡಬೇಕು" ಎಂದು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News