ಇಂದು ಸುಪ್ರೀಂನಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯ ವಿಚಾರಣೆ

Update: 2019-07-16 06:01 GMT

ಹೊಸದಿಲ್ಲಿ. ಜು.16: ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ  ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ ಶಾಸಕರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ಬೆಳಗ್ಗೆ  10:35ಕ್ಕೆ  ನಡೆಯಲಿದೆ.

ಸ್ಪೀಕರ್ ರಮೇಶ್ ಕುಮಾರ್ ನಿಲುವನ್ನು ಪ್ರಶ್ನಿಸಿ ಕರ್ನಾಟಕದ  ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ. ಸ್ಪೀಕರ್ ಪರ ತೀರ್ಪು ಸುಪ್ರೀಂ ನಿಂದ ಹೊರಬಂದರೆ ಅತೃಪ್ತ ಶಾಸಕರಿಗೆ ಸಮಸ್ಯೆಯಾಗಲಿದೆ.

ಅತೃಪ್ತ ಶಾಸಕರ ಪರ ತೀರ್ಪು ನೀಡಿದರೆ ರಾಜ್ಯದ ಮೈತ್ರಿ ಸರಕಾರ ಪತನವಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News