ಮೂಡುಬಿದಿರೆ: ಆಳ್ವಾಸ್‍ಗೆ ಗ್ರೀನ್ ಕ್ಯಾಂಪಸ್ ಪ್ರಶಸ್ತಿ

Update: 2019-07-16 12:09 GMT

ಮೂಡುಬಿದಿರೆ: ದ.ಕ. ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ಅರಣ್ಯ ಇಲಾಖೆ , ಮಂಗಳೂರು ಸ್ಮಾಟ್ ಸಿಟಿ ಲಿ., ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ಭಾರತ್ ಸ್ಕೌಟ್ಸ್ ಗೈಡ್ಸ್ ದ.ಕ.ಜಿಲ್ಲೆ ಹಾಗೂ ಕಾರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ 2019 ಪರಿಸರ ಜಾಥಾ ಹಾಗೂ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಳ್ವಾಸ್‍ಗೆ ಗ್ರೀನ್ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಆವರಣದಲ್ಲಿ ಉತ್ತಮ ಹಸಿರು ವಲಯ ನಿರ್ವಹಣೆಗಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ನೀಡಿದ ಕೊಡುಗೆಗಾಗಿ ಮತ್ತು ಪರಿಸರ ಸಂರಕ್ಷಣ ಜಾಗೃತಿ ಗಾಗಿ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಗ್ರೀನ್ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶೋಭಾವನ ವಿಶೇಷತೆ

ಮಿಜಾರು ಶೋಭಾವನ ಕ್ಯಾಂಪಸ್‍ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ನ್ಯಾಚುರೋಪತಿ ಎಂಡ್ ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಳ್ವಾಸ್ ಹೋಮಿಯೊಪತಿ ಕಾಲೇಜ್ ಒಳಗೊಂಡಿದೆ. ಶೋಭಾವನದಲ್ಲಿ ಪಶ್ಚಿಮ ಘಟ್ಟದಲ್ಲಿ ಇರುವಂತಹ ಎಲ್ಲಾ ಔಷಧಿಯ ಸಸ್ಯಗಳನ್ನು ಬೆಳೆಸಲಾಗಿದೆ. ಇದರಲ್ಲಿ ಅಪರೂಪದ ಸಸ್ಯಗಳು, ಅಪಾಯದಂಚಿನಲ್ಲಿರುವ ಸಸ್ಯಗಳು ಮತ್ತು ಅಪರೂಪದ ಸಸ್ಯಗಳಾದ ರುದ್ರಾಕ್ಷಿ, ನಾಗಲಿಂಗ ಪುಷ್ಪ, ನಾಗಕೇಸರಿ ಸಸ್ಯಗಳನ್ನು ಬೆಳೆಸಲಾಗಿದೆ. ಆಧ್ಯಾತ್ಮ ದೃಷ್ಟಿಯಿಂದಲೂ ಈ ವನ ಮಹತ್ವ ಪಡೆದಿದ್ದು, ರಾಶಿವನ, ನವಗ್ರಹವನ, ಸತ್ಯನಾರಾಯಣ ಪೂಜಾವನ, ಸಪ್ತಋಷಿ ವನ, ಹಾಗೂ ಆರ್ಯುವೇದದಲ್ಲಿ ಬರುವಂತಹ ಘನ ಆದಾರಿತ ವನಗಳನ್ನು ಬೆಳೆಸಲಾಗಿದೆ.

ಶೋಭಾವನದಲ್ಲಿ ಪಕ್ಷಿವನವಿದ್ದು ಸುಮಾರು 106 ಬಗೆಯ ಪಕ್ಷಿ ಪ್ರಭೇದವನ್ನು ಗುರುತಿಸಲಾಗಿದೆ. ಇದಲ್ಲದೆ ಚಿಟ್ಟೆ ಪಾರ್ಕ್, ನಾಟಿ ವೈದ್ಯ ಔಷಧಿವನ, ಹೋಮಿಯೋಪತಿ ಔಷಧಿವನ ಕೂಡ ಕಾಣ ಸಿಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News