ಗೋ ಸಾಗಾಟದ ಹೆಸರಿನಲ್ಲಿ ಅಮಾಯಕರಿಗೆ ಹಿಂಸೆಯ ವಿರುದ್ಧ ಎಂಡಿಸಿ ಮನವಿ

Update: 2019-07-16 12:49 GMT

ಮಂಗಳೂರು, ಜು.16: ದ.ಕ.ಜಿಲ್ಲಾದ್ಯಂತ ಗೋ ಸಾಗಾಟದ ಹೆಸರಿನಲ್ಲಿ ಅಮಾಯಕರಿಗೆ ಹಿಂಸೆ ನೀಡಿ ಅನ್ಯಾಯ ಎಸಗಲಾಗುತ್ತಿದೆ. ಇದರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿಯ ನಿಯೋಗ ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಉತ್ತರ ಭಾರತದಲ್ಲಿ ನಡೆಯುವಂತಹ ಕೃತ್ಯಗಳು ದ.ಕ.ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿವೆ. ಪೊಲೀಸ್ ಇಲಾಖೆಯೂ ಕೂಡ ಗೋ ಸಾಗಾಟ ಕಾರರು, ವ್ಯಾಪಾರಸ್ಥರು ಮತ್ತು ಗೋ ಖರೀದಿಸುವವರ ಪರೇಡ ಮಾಡಿದೆ. ಅದರಲ್ಲಿ ಹೆಚ್ಚಿನವರು ತನ್ನ ಕಸುಬನ್ನೇ ಬದಲಾಯಿಸಿದವರಿದ್ದರು. ಪರೇಡ್ ನಡೆಸಿದವರನ್ನೆಲ್ಲಾ ಕೆಲವು ಮಾಧ್ಯಮಗಳು ಗೋಕಳ್ಳರು ಎಂದು ಬಿಂಬಿಸಿವೆ. ಇದು ಆಕ್ರೋಶ ಮತ್ತು ಹತಾಶೆಗೆ ಕಾರಣವಾಗಿದೆ ಎಂದು ಎಂಡಿಸಿ ಮನವಿಯಲ್ಲಿ ತಿಳಿಸಿವೆ. ಅಲ್ಲದೆ ಶೀಘ್ರ ಸಂತ್ರಸ್ತರ ಅಹವಾಲು ಆಲಿಸಿ ನ್ಯಾಯ ದೊರಕಿಸಿಕೊಡಬೇಕು ಎಂದೂ ನಿಯೋಗ ಒತ್ತಾಯಿಸಿವೆ.

ಆಗಸ್ಟ್‌ನಲ್ಲಿ ಬಕ್ರೀದ್ ಹಬ್ಬವಿರುವುದರಿಂದ ಕಿಡಿಗೇಡಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಜಾನುವಾರು ಸಾಗಾಟಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಿಯೋಗ ಒತ್ತಾಯಿಸಿದೆ.

ಎಂಡಿಸಿ ಸ್ಥಾಪಕ ರಫೀಉದ್ದೀನ್ ಕುದ್ರೋಳಿ, ಅಧ್ಯಕ್ಷ ಅಮೀರ್ ಅಹ್ಮದ್ ತುಂಬೆ, ವಕ್ತಾರ ಝಾಕಿರ್ ಹುಸೈನ್ ಉಳ್ಳಾಲ, ಸಮಿತಿ ಸದಸ್ಯರಾದ ಅಲಿ ಹಸನ್ ಕುದ್ರೋಳಿ, ವಹಾಬ್ ಕುದ್ರೋಳಿ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News