‘ಸದಾಶಯ’ ವಿಶೇಷ ಸಂಚಿಕೆ ಬಿಡುಗಡೆ

Update: 2019-07-16 12:55 GMT

ಮಂಗಳೂರು, ಜು.16: ‘ಸಮಾಜದ ದುರ್ಬಲ ಹಾಗೂ ಶೋಷಿತ ವರ್ಗದವರಿಗಾಗಿ ಕೈಗೊಳ್ಳುವ ವಿವಿಧ ಜನಪರ ಯೋಜನೆಗಳನ್ನು ದಾಖಲಿಸುವುದರೊಂದಿಗೆ ಸದಭಿರುಚಿಯ ಓದುಗರನ್ನು ಬೆಳೆಸುವ ಸಲುವಾಗಿ ಟ್ರಸ್ಟ್‌ನ ಮುಖವಾಣಿಯನ್ನು ಪ್ರಕಟಿಸಲಾಗುತ್ತಿದೆ’ ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ)ನ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.

ಪಡು ‘ಆಶ್ರಯ’ ಎಸ್ಟೇಟ್ನಲ್ಲಿ ಇತ್ತೀಚೆಗೆ ಜರುಗಿದ ‘ಮರಿಯಲದ ಮಿನದನ’ ಕಾರ್ಯಕ್ರಮದಲ್ಲಿ ‘ಸದಾಶಯ’ ತ್ರೈಮಾಸಿಕದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆನರಾ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗುಂಡಿಲ ಶಂಕರ ಶೆಟ್ಟಿ ಪತ್ರಿಕೆ ಬಿಡುಗಡೆಗೊಳಿಸಿದರು. ‘ಸದಾಶಯ’ದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು.

ಈ ಸಂದರ್ಭ ಮೂರು ದಶಕಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಸುಳ್ಯದ ಸುಧಾಕರ ರೈ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಆಶ್ರಯ ಎಸ್ಟೇಟ್‌ನ ಪಡು ಚಿತ್ತರಂಜನ್ ರೈ, ಶೆಡ್ಡೆ ಮಂಜುನಾಥ ಭಂಡಾರಿ, ಪೆರ್ಮುದೆ ಭುಜಂಗ ಶೆಟ್ಟಿ, ಮೈನಾ ಸದಾನಂದ ಶೆಟ್ಟಿ, ಗಂಗಾರತ್ನ ಚಿತ್ತರಂಜನ್ ರೈ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ವಿಜಯಲಕ್ಷ್ಮಿ ಬಿ.ಶೆಟ್ಟಿ, ಪದಾಧಿಕಾರಿಗಳಾದ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ಜಿತೇಂದ್ರ ಶೆಟ್ಟಿ, ಸುನೀಲ್ ಶೆಟ್ಟಿ, ಹರೀಶ್ ಶೆಟ್ಟಿ, ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಸಂಪಾದಕ ಮಂಡಳಿಯ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News