ಹಜ್ ಕ್ಯಾಂಪ್‌ಗೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ. ಬಾವಾ ಭೇಟಿ

Update: 2019-07-16 12:56 GMT

ಮಂಗಳೂರು, ಜು.16: ಮಂಗಳೂರು ಹಜ್ ಕ್ಯಾಂಪ್‌ಗೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ಮಂಗಳವಾರ ಭೇಟಿ ನೀಡಿ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾದ ಹಜ್ ಯಾತ್ರಿಕರ ಲಗ್ಗೇಜ್ ಕೌಂಟರ್ ವಿಭಾಗದಲ್ಲಿದ್ದ ಯಾತ್ರಿಕರಿಗೆ ಶುಭಹಾರೈಸಿದರು.

ಬಳಿಕ ಮಾತನಾಡಿದ ಅವರು ಮಂಗಳೂರು ಹಜ್ ಭವನದ ನಿರ್ಮಾಣಕ್ಕಾಗಿ ಸರಕಾರದಿಂದಾಗುವ ಎಲ್ಲಾ ಕೆಲಸ ಕಾರ್ಯಗಳಿಗೆ ಶ್ರಮವಹಿಸು ವೆನು. ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಿಕರು ನಾಡಿನ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದರು.

ಬುಧವಾರದ ಹಜ್ ಯಾತ್ರಿಕ ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪುನಿವಾಸಿ ಮುಹಮ್ಮದ್ ಮುಸ್ಲಿಯಾರ್‌ಗೆ ಲಗ್ಗೇಜ್ ವಿಭಾಗದಲ್ಲಿ ಗುರುತಿನ ಕೈಬಳೆ, ಬೋರ್ಡಿಂಗ್ ಪಾಸ್ ಮತ್ತು ಲಗ್ಗೇಜ್ ಟ್ಯಾಗನ್ನು ಜಿ.ಎ.ಬಾವಾ ವಿತರಿಸಿದರು.

ಬಜ್ಪೆಅನ್ಸಾರ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯುತ್ತಿರುವ ಹಜ್ ಕ್ಯಾಂಪ್‌ನ ರಿಸೆಪ್ಷನ್, ವರದಿ, ಪಾಸ್‌ಪೋರ್ಟ್ ಕೌಂಟರನ್ನು ಜಿ.ಎ.ಬಾವಾ ಪರಿಶೀಲಿಸಿ ಸಮಿತಿಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಈ ಸಂದರ್ಭ ಜಿ.ಎ.ಬಾವಾ ಅವರನ್ನು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವೆಂಕಟೇಶ್ ರಾವ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ಉಪಾಧ್ಯಕ್ಷ ಸಿ.ಮಹಮೂದ್ ಹಾಜಿ, ಜೊತೆ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಬಶೀರ್ ಹಾಜಿ, ಏರ್ ಇಂಡಿಯಾ ಮಂಗಳೂರು ಮುಖ್ಯಸ್ಥ ಸುನಿಲ್ ಭಟ್, ಡೆಪ್ಯುಟಿ ಮ್ಯಾನೇಜರ್ ಅರುಣ್, ಅಹ್ಮದ್ ಬಾವಾ ಪಡೀಲ್, ಸಲೀಲ್ ಬಜ್ಪೆ, ಸುಹೈಲ್ ಕಂದಕ್, ಶಾಕಿರ್ ಹಾಜಿ ಮಿತ್ತೂರು, ಹನೀಫ್ ಹಿಲ್ಟಾಪ್, ಹಾರಿಸ್ ಕಾನತ್ತಡ್ಕ, ನಾಸಿರ್ ಲಕ್ಕಿಸ್ಟಾರ್, ಅಹ್ಮದ್ ಬಾವಾ ಬಜಾಲ್ ಉಪಸ್ಥಿತರಿದ್ದರು.

ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News