ಶಂಕರಪುರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನಾಟಿ ಪ್ರಾತ್ಯಕ್ಷಿಕೆ

Update: 2019-07-16 13:19 GMT

ಶಿರ್ವ, ಜು.16: ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲಾ ಭಾರತ ಸೇವಾ ದಳ, ಸ್ಕೌಟ್ ಆ್ಯಂಡ್ ಗೈಡ್ಸ್ ಮತ್ತು ನೇಸರ ಹಸಿರು ಪಡೆಯ 134 ವಿದ್ಯಾರ್ಥಿ ಗಳು ಸೋಮವಾರ ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿ ಅವರ ಗದ್ದೆಗೆ ಭೇಟಿ ನೀಡಿದರು.

ಕಾರ್ಯಕ್ರಮಕ್ಕೆ ಶಂಕರಪುರ ಚರ್ಚ್‌ನ ಸಹಾಯಕ ಧರ್ಮಗುರು ಫಾ. ರೋಶನ್ ಡಿಕುನ್ಹಾ ಚಾಲನೆ ನೀಡಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರ ಗೌಡ, ಸೇವಾದಳದ ತಾಲೂಕು ಅಧಿನಾಯಕ ಎಸ್.ಎಸ್. ಪ್ರಸಾದ್, ತಾಲೂಕು ಸಮಿತಿ ಸದಸ್ಯ ರಾಯನ್ ಫೆರ್ನಾಂಡಿಸ್ ಹಾಜರಿದ್ದರು.

ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು ಸಂಭ್ರಮ ಪಟ್ಟರು. ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಭತ್ತದ ಬೆಳೆಯ ಮಾಹಿತಿಯನ್ನು ಗದ್ದೆಯ ಮಾಲಕ ಪ್ರಗತಿಪರ ಕೃಷಿಕ ವಸಂತ ಪೂಜಾರಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್ ಕೃತಜ್ಞತೆ ಸಲ್ಲಿಸಿದರು.

ದೈಹಿಕ ಶಿಕ್ಷಣ ಹಾಗೂ ಭಾರತ ಸೇವದಳದ ಶಿಕ್ಷಕ ಡೋಮಿಯನ್ ಆರ್. ನೊರೋನಾ್ಹ, ಸಹ ಶಿಕ್ಷಕರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News