ರಾಷ್ಟ್ರೀಯ ಮಟ್ಟದ ನವಜಾತ ಶಿಶು ಪ್ರಾಣಪ್ರತ್ಯಾಗಮನ ತರಬೇತಿ

Update: 2019-07-16 13:22 GMT

ಉಡುಪಿ, ಜು.16: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗ ಮತ್ತು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಎನ್‌ಎನ್‌ಎಫ್ ಹಾಗೂ ಮಣಿಪಾಲ ಕೆಎಂಸಿಯ ಪಿಡಿಯಾಟ್ರಿಕ್ಸ್ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಎರಡು ದಿನಗಳ ರಾಷ್ಟ್ರೀಯ ಮಟ್ಟದ ನವಜಾತ ಶಿಶು ಪ್ರಾಣಪ್ರತ್ಯಾಗಮನ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಎಸ್‌ಡಿಎಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಐಎಪಿ ರಾಜ್ಯ ಸಂಯೋಜಕ ಡಾ.ಎನ್.ಆರ್. ಫತೇ ಪುರ್ ಕಿಮ್ಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ವಹಿಸಿದ್ದರು. ಬಾಲರೋಗ ವಿಭಾಗದ ಅಧ್ಯಕ್ಷ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ಡಾ.ಶರಶ್ಚಂದ್ರ ಆರ್. ವಂದಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ನಾಗರಾಜ್ ಎಸ್. ವಹಿಸಿದ್ದರು. ಡಾ.ಲೆಸ್ಲಿ ಲೂವಿಸ್ ಕರ್ನಾಟಕ ಹಾಗೂ ಬೇರೆ ರಾಜ್ಯಗಳಿಂದ ತರಬೇತಿ ಪಡೆಯಲು ಆಗಮಿಸಿದ ಸುಮಾರು 40 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಡಾ.ವಿಜಯಲಕ್ಷ್ಮಿ ರೈ ವಂದಿಸಿದರು. ಡಾ.ನಾಗರತ್ನ ಎಸ್.ಜೆ. ಹಾಗೂ ಡಾ.ಶ್ರೀರಾಜ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News