ಉತ್ತರಪ್ರದೇಶದ ಗ್ರಾಮದಲ್ಲಿ ಹಿಂಸಾಚಾರ: ಮದರಸಕ್ಕೆ ಬೆಂಕಿ
Update: 2019-07-16 21:22 IST
ಫತೇಪುರ (ಉತ್ತರಪ್ರದೇಶ), ಜು. 16: ಫತೇಪುರ ಜಿಲ್ಲೆಯ ಬೆಹ್ತಾ ಗ್ರಾಮದ ಕೊಳವೊಂದರಲ್ಲಿ ಪ್ರಾಣಿ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಹಿಂಸಾಚಾರ ಆರಂಭವಾಯಿತು. ಕೊಳದಲ್ಲಿ ಪ್ರಾಣಿ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದ ನಿವಾಸಿಯೋರ್ವ ಇಲ್ಲಿ ಗೋ ಹತ್ಯೆ ನಡೆಸಲಾಗಿದೆ ಸುದ್ದಿ ಹಬ್ಬಿಸಿದ್ದ. ಇದರಿಂದ ಉದ್ರಿಕ್ತರಾದ ಹಲವು ಗ್ರಾಮಗಳ ಜನರು ಸಂಘಟಿತರಾಗಿ ಮದರಸದ ಮೇಲೆ ದಾಳಿ ನಡೆಸಿದ್ದಾರೆ ಹಾಗೂ ಬೆಂಕಿ ಹಚ್ಚಿದ್ದಾರೆ.
ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.