ಎಸ್ಪಿ ನಾಯಕ ನೀರಜ್ ಶೇಖರ್ ರಾಜೀನಾಮೆ ಸ್ವೀಕರಿಸಿದ ರಾಜ್ಯ ಸಭೆ ಸ್ಪೀಕರ್ ವೆಂಕಯ್ಯ ನಾಯ್ಡು

Update: 2019-07-16 17:24 GMT

ಹೊಸದಿಲ್ಲಿ, ಜು. 16: ಸಮಾಜವಾದಿ ಪಕ್ಷದ ನಾಯಕ ನೀರಜ್ ಶೇಖರ್ ನೀಡಿದ ರಾಜೀನಾಮೆಯನ್ನು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮಂಗಳವಾರ ಸ್ವೀಕರಿಸಿದ್ದಾರೆ.

ಇಂದು ಸದನ ಆರಂಭವಾಗುತ್ತಿದ್ದಂತೆ ನಾಯ್ಡು ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

‘‘ನಾನು (ಶೇಖರ್ ಅವರಲ್ಲಿ) ವಿಚಾರಣೆ ನಡೆಸಿದ್ದೇನೆ. ಅವರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ನಿಜವಾದುದು. ಜುಲೈ 15ರಿಂದ ಅನ್ವಯವಾಗುವಂತೆ ನಾನು ಅವರ ರಾಜೀನಾಮೆ ಸ್ವೀಕರಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಎರಡು ಬಾರಿ ಲೋಕಸಭಾ ಸಂಸದರಾಗಿದ್ದ 50ರ ಹರೆಯದ ನೀರಜ್ ಶೇಖರ್ ಅವರು ತಂದೆಯ ಸಾವಿನ ಬಳಿಕ 2007ರಲ್ಲಿ ಬಲಿಯಾದಿಂದ ಕೆಳಮನೆಗೆ ಮೊದಲಬಾರಿಗೆ ಆಯ್ಕೆಯಾಗಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಅವರು ಆ ಸ್ಥಾನವನ್ನು ಉಳಿಸಿಕೊಂಡಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಅವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶಿಸಿತ್ತು. ಮೇಲ್ಮನೆಯಲ್ಲಿ ಶೇಖರ್ ಅವರ ಅಧಿಕಾರವಧಿ ನವೆಂಬರ್ 2020ರಲ್ಲಿ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News