ಮುಂಬೈ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಬಂಧನ

Update: 2019-07-17 08:12 GMT

ಹೊಸದಿಲ್ಲಿ, ಜು.17: ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಝ್ ಸಯೀದ್‌ನನ್ನು ಬಂಧಿಸಲಾಗಿದ್ದು, ಜೈಲಿಗೆ ಅಟ್ಟಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ನ್ಯೂಸ್ ಏಜೆನ್ಸಿ ಎಎನ್‌ಐ ತಿಳಿಸಿದೆ.

ಉಗ್ರ ಸಂಘಟನೆ ಲಷ್ಕರೆ ತಯ್ಯಬ ಮುಖ್ಯಸ್ಥ ಸಯೀದ್ ಪಾಕಿಸ್ತಾನದಲ್ಲಿ 23 ಭಯೋತ್ಪಾದಕ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಭಾರತ ಈತನ ವಿರುದ್ಧ ಭಯೋತ್ಪಾದನೆಯ ಪ್ರಕರಣಗಳನ್ನು ದಾಖಲಿಸಿದ್ದರೂ ಆತ ಪಾಕ್‌ನ ಬೀದಿಗಳಲ್ಲಿ ನಿರ್ಭಯದಿಂದ ಓಡಾಡಿಕೊಂಡಿದ್ದ. ಭಾರತ ವಿರುದ್ಧ ರ್ಯಾಲಿಗಳನ್ನು ನಡೆಸುತ್ತಿದ್ದ.

2017ರಲ್ಲಿ ಹಫೀಝ್ ಹಾಗೂ ಆತನ ನಾಲ್ವರು ಸಹಚರರನ್ನು ಪಾಕಿಸ್ತಾನ ಸರಕಾರ ಬಂಧಿಸಿತ್ತು. ಪಂಜಾಬ್‌ನ ನ್ಯಾಯಪುನರ್‌ಪರಿಶೀಲನಾ ಮಂಡಳಿ ಬಂಧನ ಮುಂದುವರಿಸಲು ನಿರಾಕರಿಸಿದ ಕಾರಣ ಕೇವಲ 11 ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News