ನೀಟ್ ಪರೀಕ್ಷೆ ನಕಲಿ: ಡಿಎಂಕೆ ಶಾಸಕಿ ಆರೋಪ

Update: 2019-07-17 16:24 GMT

ಚೆನ್ನೈ, ಜು. 17: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅಲ್ಲದೆ ಇದೊಂದು ನಕಲಿ ಪರೀಕ್ಷೆ ಎಂದು ಡಿಎಂಕೆ ಶಾಸಕಿ ಹಾಗೂ ಮಾಜಿ ಮಂತ್ರಿ ಪೂಂಗೋದೈ ಅಲಾದಿ ಅರುಣ ಅವರು ಮಂಗಳವಾರ ಹೇಳಿದ್ದಾರೆ.

‘‘ನೀಟ್‌ಗೆ ತರಬೇತಿ ನೀಡುವ ಮೂಲಕ ಖಾಸಗಿ ಕೋಚಿಂಗ್ ಸೆಂಟರ್‌ಗಳು ಲಕ್ಷಾಂತರ ರೂಪಾಯಿ ಗಳಿಸುತ್ತಿವೆ. ಕಳೆದ ವರ್ಷ ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 100 ತಪ್ಪುಗಳು ಇದ್ದವು’’ ಎಂದು ಅವರು ಹೇಳಿದರು. ಆರೋಗ್ಯ ಹಾಗೂ ಕುಟಂಬ ಕಲ್ಯಾಣ ಇಲಾಖೆಗೆ ಅನುದಾನಕ್ಕೆ ಆಗ್ರಹಿಸಿದ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ನಡೆದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಶೇ. 15 ಎಂಬಿಬಿಎಸ್ ಸೀಟು (490) ಗಳನ್ನು ಆಲ್ ಇಂಡಿಯಾ ಕೋಟಾಕ್ಕೆ ನೀಡಲಾಗುತ್ತಿದೆ.

ಇದರಲ್ಲಿ 245 ಸೀಟುಗಳು ಒಬಿಸಿಗೆ ಮೀಸಲಿರಿಸಬೇಕು. ಇದೇ ರೀತಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಲ್ಲಿ ಕೂಡ 879 ಸೀಟುಗಳ ಪೈಕಿ 440 ಸೀಟುಗಳನ್ನು ಒಬಿಸಿಗೆ ಮೀಸಲಿರಿಸಬೇಕು. ಆದರೆ, ಒಬಿಸಿಗೆ ಮೀಸಲಾತಿ ಇಲ್ಲ ಎಂದು ಅವರು ಹೇಳಿದ್ದಾರೆ. ಈ ವಿಷಯದ ಕುರಿತು ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿದೆ. ಈ ವರ್ಷ ತಮಿಳುನಾಡು ಹೆಚ್ಚುವರಿ 208 ಸ್ನಾತಕೋತ್ತರ ಸೀಟುಗಳು ಹಾಗೂ 123 ಸೂಪರ್ ಸ್ಪೆಷಾಲಿಟಿ ಸೀಟುಗಳನ್ನು ಪಡೆದುಕೊಂಡಿದೆ ಎಂದು ಆರೋಗ್ಯ ಸಚಿವ ಸಿ. ವಿಜಯಬಾಸ್ಕರ್ ಹೇಳಿದರು.

ನೀತಿ ಆಯೋಗದ ಆರೋಗ್ಯ ಸೂಚ್ಯಾಂಕದ ಬಗ್ಗೆ ಚರ್ಚೆ ನಡೆದ ಸಂದರ್ಭ ಅವರು, ರ್ಯಾಂಕಿಗ್ ವ್ಯವಸ್ಥೆ ಬಗ್ಗೆ ರಾಜ್ಯ ಆಕ್ಷೇಪ ದಾಖಲಿಸಬೇಕು ಎಂದು ಮರು ಉಚ್ಚರಿಸಿದರು. ಇತ್ತೀಚೆಗೆ ಬಿಡುಗಡೆ ಮಾಡಲಾದ ಆರೋಗ್ಯ ಸೂಚ್ಯಾಂಕದಲ್ಲಿ ತಮಿಳುನಾಡು ಮೂರನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News