ಶ್ರೀಲಂಕಾಗೆ ಯುದ್ಧನೌಕೆ ಉಡುಗೊರೆ ನೀಡಿದ ಚೀನಾ

Update: 2019-07-17 16:34 GMT

ಬೀಜಿಂಗ್, ಜು. 17: ಹಿಂದೂ ಮಹಾಸಾಗರದ ಆಯಕಟ್ಟಿನ ಸ್ಥಳದಲ್ಲಿರುವ ಶ್ರೀಲಂಕಾ ಜೊತೆಗಿನ ಸೇನಾ ಸಹಕಾರವನ್ನು ಬಲಗೊಳಿಸುತ್ತಿರುವ ಚೀನಾವು, ಆ ದೇಶಕ್ಕೆ ಯುದ್ಧ ನೌಕೆಯೊಂದನ್ನು ಉಡುಗೊರೆಯಾಗಿ ನೀಡಿದೆ.

ಅದೇ ವೇಳೆ, ಶ್ರೀಲಂಕಾಕ್ಕೆ ‘ಹೊಸ ಮಾದರಿ’ಯ ಒಂಬತ್ತು ಡೀಸೆಲ್ ರೈಲುಗಳನ್ನು ಶೀಘ್ರದಲ್ಲೇ ಪೂರೈಸುವುದಾಗಿ ಚೀನಾದ ರೈಲು ತಯಾರಿಕಾ ಕಂಪೆನಿಯೊಂದು ಘೋಷಿಸಿದೆ.

ಚೀನಾದ ಉಡುಗೊರೆಯಾಗಿರುವ ‘ಪಿ625’ ಫ್ರಿಗೇಟ್ (ಯುದ್ಧ ನೌಕೆ) ಕಳೆದ ವಾರ ಕೊಲಂಬೊ ತಲುಪಿದೆ.

2,300 ಟನ್ ತೂಕದ ಯುದ್ಧ ನೌಕೆಯನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ನೌಕಾಪಡೆಗೆ 1994ರಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಅದನ್ನು 2015ರಲ್ಲಿ ಸೇವೆಯಿಂದ ಹೊರಗಿಡಲಾಗಿತ್ತು. ಈಗ ಅದನ್ನು ಶ್ರೀಲಂಕಾಕ್ಕೆ ಉಡುಗೊರೆಯಾಗಿ ನೀಡಲಾಗುತ್ತಿದೆ.

 ಭಾರತವು ಕಳೆದ ವರ್ಷ ತಟರಕ್ಷಣಾ ಪಡೆಯ ಗಸ್ತು ದೋಣಿಯೊಂದನ್ನು ಶ್ರೀಲಂಕಾ ನೌಕಾಪಡೆಗೆ ಉಡುಗೊರೆ ನೀಡಿತ್ತು. ಅದೂ ಅಲ್ಲದೆ, 2006 ಮತ್ತು 2008ರಲ್ಲಿ ಇದೇ ಮಾದರಿಯ ಎರಡು ಗಸ್ತು ದೋಣಿಗಳನ್ನು ಶ್ರೀಲಂಕಾಕ್ಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News