ಕಂಪೆನಿ ಕಾನೂನಿಗೆ ತಿದ್ದುಪಡಿ: ಸಂಪುಟ ಅನುಮತಿ

Update: 2019-07-17 16:49 GMT

ಹೊಸದಿಲ್ಲಿ, ಜು. 17: ಕಂಪೆನಿ ಕಾಯ್ದೆ 2013 ತಿದ್ದುಪಡಿ ಮಸೂದೆಗೆ ಸರಕಾರ ಬುಧವಾರ ಒಪ್ಪಿಗೆ ನೀಡಿದೆ. 2019ರಲ್ಲಿ ಜಾರಿಗೊಳಿಸಲಾದ ಆಧ್ಯಾದೇಶದ ಸ್ಥಾನದಲ್ಲಿ ಈ ಮಸೂದೆ ಜಾರಿಗೆ ಬರಲಿದೆ. ‘‘ಪ್ರಸಾವಿತ ತಿದ್ದುಪಡಿ ರಾಷ್ಟ್ರೀಯ ಕಂಪೆನಿ ಕಾನೂನು ಟ್ರಿಬ್ಯೂನಲ್ ಹಾಗೂ ವಿಶೇಷ ನ್ಯಾಯಾಲಯಗಳ ಅಡಚರಣೆ ನಿವಾರಣೆ, ವ್ಯವಹಾರದ ಸುಗಮ ನಿರ್ವಹಣೆಯನ್ನು ಉತ್ತೇಜಿಸಲಿದೆ.’’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಕಾಯ್ದೆಗಳ ಉಲ್ಲಂಘನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ ಕಾರ್ಪೋರೇಟರ್‌ಗಳ ಅನುಸರಣೆ ವರ್ಧಿಸುವ ಖಾತರಿ ನೀಡುವಲ್ಲಿ ಇದು ಗಮನ ಕೇಂದ್ರೀಕರಿಸಲಿದೆ. ‘‘ಈ ತಿದ್ದುಪಡಿ ಕಾನೂನು ಪಾಲಿಸುವ ಕಾರ್ಪೋರೇಟ್ಸ್‌ಗಳಿಗೆ ಪ್ರಯೋಜನ ನೀಡುತ್ತದೆ. ಅದೇ ರೀತಿ ಕಂಪೆನಿ ಕಾಯ್ದೆ 2013ರಲ್ಲಿರುವ ಕಾರ್ಪೋರೇಟ್ ಆಡಳಿತಗಳು ಹಾಗೂ ಅನುಸರಣೆಯ ವಿನ್ಯಾಸದ ನಡುವಿನ ಅಂತರವನ್ನು ತುಂಬುತ್ತದೆ’’ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಸಂಪುಟದಲ್ಲಿ ಈ ಮಸೂದೆಗೆ ಒಪ್ಪಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News