ಉ.ಪ್ರದೇಶ: ಸಮಾಜವಾದಿ ಪಕ್ಷದ ಮುಖಂಡನ ನಿವಾಸದಲ್ಲಿ ಸಿಬಿಐ ಶೋಧ

Update: 2019-07-17 17:02 GMT

ಲಕ್ನೊ, ಜು.17: ಉದ್ಯಮಿಯ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಬುಧವಾರ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಇತರರ ನಿವಾಸದಲ್ಲಿ ಶೋಧ ನಡೆಸಿದೆ. ಉತ್ತರಪ್ರದೇಶದ ಲಕ್ನೊ ಮತ್ತು ಅಲಹಾಬಾದ್‌ನಲ್ಲಿರುವ 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

2018ರ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್‌ನನ್ನು ಲಕ್ನೋದಿಂದ ಅಪಹರಿಸಿ ಉತ್ತರಪ್ರದೇಶದ ಗೋರಖ್‌ಪುರದಲ್ಲಿರುವ ದಿಯೊರಿಯಾ ಜೈಲಿಗೆ ತರಲಾಗಿತ್ತು. ಪ್ರಕರಣವೊಂದಕ್ಕೆ ಸಂಬಂಧಿಸಿ ಅಲ್ಲಿ ಬಂಧನಲ್ಲಿದ್ದ ಅತೀಕ್ ಅಹ್ಮದ್‌ನ ಸೂಚನೆ ಮೇರೆಗೆ ಅಪಹರಣ ನಡೆದಿತ್ತು ಮತ್ತು ಜೈಲಿನಲ್ಲಿ ಅಹ್ಮದ್ ಮತ್ತವನ ಬೆಂಬಲಿಗರು ಜೈಸ್ವಾಲ್‌ನ ಮೇಲೆ ತೀವ್ರ ಹಲ್ಲೆ ನಡೆಸಿ ಆತನ ರಿಯಲ್ ಎಸ್ಟೇಟ್ ಉದ್ಯಮವನ್ನು ಅಹ್ಮದ್‌ನ ಹೆಸರಿಗೆ ಬರೆದುಕೊಡುವಂತೆ ಬೆದರಿಸಿದ್ದರು ಎಂಬ ಆರೋಪದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

 ಅತೀಕ್ ಅಹ್ಮದ್ 2004ರಿಂದ 2009ರವರೆಗೆ ಉತ್ತರಪ್ರದೇಶದ ಫೂಲ್‌ಪುರ ಸಂಸದೀಯ ಕ್ಷೇತ್ರದ ಸಂಸದರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News