ಮಹಾರಾಷ್ಟ್ರ ಚುನಾವಣೆಗಳಲ್ಲಿ ಇವಿಎಂ‌ಗಳ ಬದಲು ಮತಪತ್ರ ಬಳಕೆಗೆ ಎನ್‌ಸಿಪಿ ನಾಯಕ ಪವಾರ್ ಆಗ್ರಹ

Update: 2019-07-18 15:21 GMT

ಮುಂಬೈ,ಜು.18: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳಲ್ಲಿ ತಾಂತ್ರಿಕ ಹಸ್ತಕ್ಷೇಪ ನಡೆಸಬಹುದು ಎಂಬ ಶಂಕೆ ಜನರಲ್ಲಿದೆ ಎಂದು ಹೇಳಿರುವ ಹಿರಿಯ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು,ಪ್ರಜಾಪ್ರಭುತ್ವಕ್ಕೆ ಚ್ಯುತಿಯುಂಟಾಗದಂತೆ ಮತ್ತು ಪ್ರಜೆಗಳ ವಿಶ್ವಾಸಕ್ಕೆ ಭಂಗವುಂಟಾಗದಂತೆ ನೋಡಿಕೊಳ್ಳಲು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳನ್ನು ಮತಪತ್ರಗಳನ್ನು ಬಳಸಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

 ಇವಿಎಂ‌ಗಳ ಕಾರ್ಯ ನಿರ್ವಹಣೆಯ ಕುರಿತು ತನಗೆ ಯಾವುದೇ ಶಂಕೆಯಿಲ್ಲ ಎಂದು ಈ ವರ್ಷದ ಮೇ ತಿಂಗಳಿನಲ್ಲಿ ಹೇಳಿದ್ದ ಪವಾರ್ ಒಂದು ತಿಂಗಳ ಬಳಿಕ ಇವಿಎಂಗಳ ಕುರಿತು ಟೀಕೆಗಳನ್ನು ಪ್ರಶ್ನಿಸಿದ್ದರಲ್ಲದೆ,ಮತದಾನ ಯಂತ್ರಗಳನ್ನು ದೂರುವ ಬದಲು ಚುನಾವಣೆಗೆ ಸಿದ್ಧರಾಗುವುದರ ಬಗ್ಗೆ ಗಮನ ಹರಿಸುವಂತೆ ಎನ್‌ಸಿಪಿ ಕಾರ್ಯಕರ್ತರಿಗೆ ಸೂಚಿಸಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿವೆ.

ಶ್ರೀಮಂತ ರಾಷ್ಟ್ರಗಳಲ್ಲಿ ಮತಪತ್ರಗಳನ್ನು ಬಳಸಿಯೇ ಚುನಾವಣೆಗಳನ್ನು ನಡೆಸಲಾಗುತ್ತಿದೆ ಎಂದೂ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಎಂಎನ್‌ಎಸ್‌ನಂತಹ ಇತರ ಪ್ರತಿಪಕ್ಷಗಳೂ ವಿಧಾನಸಭಾ ಚುನಾವಣೆಯಲ್ಲಿ ಮತಪತ್ರಗಳ ಬಳಕೆಗೆ ಒತ್ತಾಯಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News