ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯನ್ನು ಗುರುತಿಸಿದ ಪತ್ನಿ ಉಮಾದೇವಿ

Update: 2019-07-18 16:04 GMT

ಹೊಸದಿಲ್ಲಿ, ಜು. 19: “ಗುರುತು ಪತ್ತೆ ಪರೇಡ್‌ನಲ್ಲಿ ಲೇಖಕ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ನನ್ನ ಅಮ್ಮ ಗುರುತಿಸಿದ್ದಾರೆ” ಎಂದು ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಕಲ್ಬುರ್ಗಿ ಬುಧವಾರ ಹೇಳಿದ್ದಾರೆ.

ಕಲಬುರ್ಗಿ ಅವರನ್ನು ಧಾರವಾಡದ ಅವರ ಮನೆಯಲ್ಲಿ 2015 ಆಗಸ್ಟ್ 30ರಂದು ಗುಂಡು ಹಾರಿಸಿ ಹತೈಗೈಯಲಾಗಿತ್ತು. ‘‘ಇಂದು ನಡೆದ ಗುರುತು ಪತ್ತೆ ಪರೇಡ್‌ನಲ್ಲಿ ಅವರು ಓರ್ವ ಆರೋಪಿಯನ್ನು ಗುರುತಿಸಿದ್ದಾರೆ. ಆದರೆ, ಗುರುತಿಸಲಾದ ವ್ಯಕ್ತಿಯ ಹೆಸರನ್ನು ನಮಗೆ ತಿಳಿಸಿಲ್ಲ’’ ಎಂದು ಶ್ರೀವಿಜಯ ಕಲಬುರ್ಗಿ ತಿಳಿಸಿದ್ದಾರೆ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಗುರುತಿಸಿದ ವ್ಯಕ್ತಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದಾನೆ ಎಂದು ವರದಿಯೊಂದು ಹೇಳಿದೆ.

ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯ ಹೊರಭಾಗದಲ್ಲಿ 2017 ಸೆಪ್ಟಂಬರ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಕಲಬುರ್ಗಿ ಪ್ರಕರಣಕ್ಕೆ ಸಂಬಂಧಿಸಿ ಸಿಟ್ ಶೀಘ್ರದಲ್ಲಿ ಆರೋಪ ಪಟ್ಟಿ ಸಲ್ಲಿಸಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಸಾಮಾಜಿಕ ಹೋರಾಟಗಾರ ಗೋವಿಂದ ಪನ್ಸಾರೆ, ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದವರೇ” ನನ್ನ ಪತಿಯನ್ನು ಕೂಡ ಹತೈಗೈದಿದ್ದಾರೆ ಎಂದು ಉಮಾದೇವಿ ಕಲ್ಬುರ್ಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News