ಸೌದಿ ಜೊತೆಗಿನ 8 ಬಿಲಿಯ ಡಾ. ಶಸ್ತ್ರಾಸ್ತ್ರ ಒಪ್ಪಂದಕ್ಕೆ ಹೌಸ್ ತಡೆ

Update: 2019-07-18 16:37 GMT

ವಾಶಿಂಗ್ಟನ್, ಜು. 18: ಸೌದಿ ಅರೇಬಿಯ ಮತ್ತು ಇತರ ದೇಶಗಳಿಗೆ 8.1 ಬಿಲಿಯ ಡಾಲರ್ (ಸುಮಾರು 55,780 ಕೋಟಿ ರೂಪಾಯಿ) ವೌಲ್ಯದ ಶಸ್ತ್ರಾಸ್ತ್ರಗಳ ಮಾರಾಟವನ್ನು ತಡೆಹಿಡಿಯುವ ಪರವಾಗಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ ಮತ ಹಾಕಿದೆ.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಆ ದೇಶದ ಆಡಳಿತದ ಪಾತ್ರವಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಹೆಚ್ಚಿನ ಸಂಸದರು, ಶಸ್ತ್ರಾಸ್ತ್ರಗಳ ಮಾರಾಟಕ್ಕೆ ತಡೆಯೊಡ್ಡುವ ಉದ್ದೇಶದ ಮೂರು ನಿರ್ಣಯಗಳ ಪರವಾಗಿ ಮತ ಹಾಕಿದರು.

ಆದಾಗ್ಯೂ, ಈ ನಿರ್ಣಯಗಳಿಗೆ ಹೆಚ್ಚಿನ ಮಹತ್ವವಿಲ್ಲ. ಅವುಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಟೊ ಚಲಾಯಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News