ಹಿಂದಿ ಕಿರುತೆರೆಯ ಖ್ಯಾತ ಬಾಲನಟ ಶಿವ್‌ಲೇಖ್ ಸಿಂಗ್ ರಸ್ತೆ ಅಪಘಾತಕ್ಕೆ ಬಲಿ

Update: 2019-07-19 04:54 GMT

ರಾಯ್‌ಪುರ, ಜು.19: ಹಿಂದಿ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ನಟಿಸಿದ್ದ ಬಾಲನಟ ಶಿವಲೇಖ್ ಸಿಂಗ್(14) ಪ್ರಯಾಣಿಸುತ್ತಿದ್ದ ಕಾರು ರಾಯ್‌ಪುರದ ಹೊರವಲಯದಲ್ಲಿ ಗುರುವಾರ ಟ್ರಕ್‌ವೊಂದಕ್ಕೆ ಢಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ. ಸಿಂಗ್ ಅವರೊಂದಿಗಿದ್ದ ಹೆತ್ತವರು ಹಾಗೂ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

ಧರ್ಸಿವಾ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಶಿವ್‌ಲೇಖ್ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ತಾಯಿ ಲೇಖ್ ಹಾಗೂ ತಂದೆ ಶಿವೇಂದ್ರ ಸಿಂಗ್, ನವೀನ್ ಸಿಂಗ್ ಎಂಬಾತ ಗಾಯಗೊಂಡಿದ್ದರು ಎಂದು ರಾಯ್‌ಪುರ ಎಸ್ಪಿ ಆರಿಫ್ ಶೇಕ್ ತಿಳಿಸಿದ್ದಾರೆ.

ಶಿವ್‌ಲೇಖ್ ಕುಟುಂಬದವರು ಬಿಲಾಸ್‌ಪುರದಿಂದ ರಾಯ್‌ಪುರಕ್ಕೆ ಬರುವಾಗ ಘಟನೆ ನಡೆದಿದ್ದು, ಶಿವ್‌ಲೇಖ್ ತಾಯಿಯ ಸ್ಥಿತಿ ಗಂಭೀರವಾಗಿದೆ.

ಛತ್ತೀಸ್‌ಗಢದ ಜಂಗಿರ್-ಚಂಪಾ ಜಿಲ್ಲೆಯವರಾದ ಶಿವಲೇಖ್ ತನ್ನ ಹೆತ್ತವರೊಂದಿಗೆ ಮುಂಬೈನಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದರು. ‘ಸಂಕಟ್‌ಮೋಚನ್ ಹನುಮಾನ್ ಹಾಗೂ ‘ಸಸುರಾಲ್ ಸಿಮಾರ್ ಕಾ’ ಸಹಿತ ಹಲವು ಟಿವಿ ಧಾರಾವಾಹಿಗಳಲ್ಲಿ, ಟಿವಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News