​ರಾಸು ವಿಮಾ ಯೋಜನೆಯ ಸದುಪಯೋಗಕ್ಕೆ ಮನವಿ

Update: 2019-07-19 11:02 GMT

ಮಂಗಳೂರು, ಜು.19: ದ.ಕ.ಜಿಲ್ಲಾ ಹಾಲು ಒಕ್ಕೂಟದಲ್ಲಿ ರೈತರ ಕಲ್ಯಾಣ ಟ್ರಸ್ಟ್ ಯೋಜನೆಯಡಿ ಸಂಘಗಳ ಸದಸ್ಯರ ರಾಸುಗಳು ಮರಣ ಹೊಂದಿದ ಸಂದರ್ಭ ಸಾಂಕೇತಿಕವಾಗಿ ಪರಿಹಾರ ನೀಡಲಾಗುತ್ತಿದೆ. ಹೆಚ್ಚಿನ ಬೆಲೆ ಬಾಳುವ ರಾಸುಗಳು ಮರಣ ಹೊಂದಿದಾಗ ಉಂಟಾಗುವ ನಷ್ಟವನ್ನು ಭರಿಸಲು ಅನುಕೂಲವಾಗಲು, ರಾಸುವಿನ ಪೂರ್ಣ ಮೌಲ್ಯ ಸಿಗುವಂತೆ ಒಕ್ಕೂಟದಿಂದ ರಾಸುಗಳಿಗೆ ಗುಂಪು ವಿಮಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕನಿಷ್ಟ ಪ್ರೀಮಿಯಂನೊಂದಿಗೆ ಶೇ.50ರಷ್ಟು ಒಕ್ಕೂಟದ ಅನುದಾನದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಈ ಯೋಜನೆಯನ್ನು ಎಪ್ರಿಲ್, 2018ರಿಂದ ಹಮ್ಮಿಕೊಂಡಿದ್ದು, ಪ್ರಥಮ ಹಂತವಾಗಿ 10,000 ರಾಸುಗಳನ್ನು ವಿಮೆಗೆ ಒಳಪಡಿಸುವ ಉದ್ದೇಶವಿರುತ್ತದೆ. ಈವರೆಗೆ 3,984 ರಾಸುಗಳನ್ನು ಸದಸ್ಯರು ವಿಮೆಗೆ ಒಳಪಡಿಸಿದ್ದಾರೆ. ವಿಮೆಗೆ ಒಳಪಡಿಸಿದ ಪೂರ್ಣ ಮೊತ್ತ ಸಿಗಲು ಅವಕಾಶವಿರುವ ರಾಸುವಿನ ವಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಗಳಲ್ಲಿ ರಾಸುಗಳನ್ನು ಒಳಪಡಿಸಿ ನಷ್ಟವನ್ನು ತಪ್ಪಿಸಲು ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News