ಎನ್‌ಆರ್‌ಸಿ ಗಡು ವಿಸ್ತರಣೆಗೆ ಕೇಂದ್ರದಿಂದ ಸುಪ್ರೀಂಕೋರ್ಟ್‌ಗೆ ಮನವಿ

Update: 2019-07-19 17:57 GMT

ಹೊಸದಿಲ್ಲಿ, ಜು. 19: ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಪ್ರಕಟನೆಯ ಅಂತಿಮ ಗುಡುವನ್ನು ಜುಲೈ 31ರ ವರೆಗೆ ವಿಸ್ತರಿಸುವಂತೆ ಕೇಂದ್ರ ಹಾಗೂ ಅಸ್ಸಾಂ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

 ಸರಕಾರಗಳನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಟ್ಟಿಯಲ್ಲಿ ಪ್ರಾಮಾಣಿಕ ನಾಗರಿಕರ ಹೆಸರನ್ನು ಸೇರಿಸಲು ದಿನಾಂಕವನ್ನು ಮುಂದೂಡುವ ಅಗತ್ಯ ಇದೆ ಎಂದರು. ಭಾರತ ಪ್ರಪಂಚದ ನಿರಾಶ್ರಿತರ ರಾಜಧಾನಿಯಾಗಲು ಸಾಧ್ಯವಿಲ್ಲ ಎಂದು ತುಷಾರ್ ಮೆಹ್ತಾ ತಿಳಿಸಿದರು. ಪಟ್ಟಿಯಲ್ಲಿ ಸೇರಿಸುವ ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳ ನಾಗರಿಕರಲ್ಲಿ ಕನಿಷ್ಠ ಶೇ. 20 ನಾಗರಿಕರ ಪುನರ್ ಪರಿಶೀಲನೆ ಅಗತ್ಯ ಇದೆ. ಈ ರಾಜ್ಯದಲ್ಲಿ ಇರುವ ಹೆಚ್ಚಿನ ವಲಸಿಗರು ಬಾಂಗ್ಲಾದೇಶದಿಂದ ಬಂದವರು ಎಂದು ಮೆಹ್ತಾ ಹೇಳಿದರು.

ಪಟ್ಟಿಯಲ್ಲಿ ತಮ್ಮನ್ನು ಸೇರಿಸುವಂತೆ ಅರ್ಜಿ ಸಲ್ಲಿಸಿದ ಶೇ. 27 ಜನರು ಅಂದರೆ ಸುಮಾರು 80 ಲಕ್ಷ ನಾಗರಿಕರನ್ನು ಮರು ಪರಿಶೀಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಒಳಗೊಂಡ ಪೀಠಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿಯ ರಾಜ್ಯ ಸಂಘಟಕ ಪ್ರತೀಕ್ ಹಜೇಲಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News