ವಿಟಿಯು ಫಲಿತಾಂಶ ಪ್ರಕಟ: ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ

Update: 2019-07-19 18:36 GMT

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಸಿ.ಎಸ್.ಇ ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಾಗಿದೆ. 90 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಸ್ಮಿನೆ ಪ್ರಿನ್ಸಿ ಲೋಬೊ ಶೇ.88.71 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಐ.ಎಸ್.ಸಿ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

29 ವಿಶಿಷ್ಟ ಶ್ರೇಣಿ ಪಡೆದುಕೊಂಡಿದ್ದಾರೆ. ಹರ್ಷಿತಾ ಶೇ.88.57 ಅಂಕ ಪಡೆದು ಪ್ರಥಮ ಸ್ಥಾನಿಯಾಗಿದ್ದಾರೆ. ಇ.ಸಿ.ಇ ವಿಭಾಗದಲ್ಲಿ ಶೇ.100 ಫಲಿತಾಂಶದೊಂದಿಗೆ 87 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  ಪ್ರಿಯಾ ಸುರೇಶ್ ನಾಯ್ಕ್ ಶೇ.90.43 ಪ್ರಥಮ ಸ್ಥಾನಿಯಾಗಿದ್ದರು. ಸಿ.ವಿ.ಎಲ್ ವಿಭಾಗದಲ್ಲಿ 98 ಪ್ರತಿಶತ ಫಲಿತಾಂಶದೊಂದಿಗೆ 101 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಂಜುಳಾ ಪರಪ್ಪ ಶೇ.89.29 ಪಡೆಯುವುದರೊಂದಿಗೆ ಮುಂಚೂಣಿಯಲ್ಲಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.98 ಫಲಿತಾಂಶ ದಾಖಲಾಗಿದೆ. 130 ವಿದ್ಯಾರ್ಥಿಗಳು ಫಸ್ಟ್ ವಿಶಿಷ್ಟ ಶ್ರೇಣಿ ಪಡೆದಿದ್ದಾರೆ.  ಅನಂದ್ ಹಿ ವಾರಿಯರ್ ಶೇ.90.57 ಫಲಿತಾಂಶದೊಂದಿಗೆ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News