ಮುಸ್ಲಿಮರು ಪಾಕ್‌ಗೆ ತೆರಳದಂತೆ ನೆಹರೂ, ಸರ್ದಾರ್, ಗಾಂಧಿ ಮನವಿ ಮಾಡಿದ್ದರು: ಆಝಂ ಖಾನ್

Update: 2019-07-20 15:00 GMT

ಹೊಸದಿಲ್ಲಿ,ಜು.20: 1947ರಲ್ಲಿ ನಡೆದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ತೆರಳಿದಿರುವ ನಿರ್ಧಾರಕ್ಕಾಗಿ ಮುಸ್ಲಿಮರು ಇಂದು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಸಂಸದ ಆಝಮ್ ಖಾನ್ ಹೇಳಿದ್ದಾರೆ. “ನಮ್ಮ ಹಿರಿಯವರು ಯಾಕೆ ಪಾಕಿಸ್ತಾನಕ್ಕೆ ಹೋಗಲಿಲ್ಲ? ಅವರು ಭಾರತವನ್ನು ತಮ್ಮ ರಾಷ್ಟ್ರ ಎಂದು ಪರಿಗಣಿಸಿದ್ದರು. ಅದು ನಮ್ಮ ತಪ್ಪಾಗಿತ್ತು. ಮೌಲಾನಾ ಆಝಾದ್, ಜವಾಹರ್ ಲಾಲ್ ನೆಹರೂ, ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯೂ ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳದಂತೆ ಮನವಿ ಮಾಡಿದ್ದರು” ಎಂದು ದೇಶದಲ್ಲಿ ಹೆಚ್ಚುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳ ಬಗ್ಗೆ ಪ್ರಶ್ನಿಸಿದಾಗ ತಿಳಿಸಿದರು.

ಮುಸ್ಲಿಮರು ಭಾರತದಲ್ಲಿ ಘನತೆಯ ಜೀವನ ಜೀವಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಉತ್ತರ ಪ್ರದೇಶದ ರಾಮ್‌ಪುರ ಕ್ಷೇತ್ರದ ಸಂಸದ, “1947ರಿಂದ ನಾವು ಹೇಸಿಗೆಯ ಜೀವನ ಜೀವಿಸುತ್ತಿದ್ದೇವೆ ಮತ್ತು ನಾವು ಇದರ ಬಗ್ಗೆ ನಮಗೆ ನಾಚಿಕೆಯಿದೆ” ಎಂದು ಖೇದ ವ್ಯಕ್ತಪಡಿಸಿದ್ದಾರೆ. “ನಾನು ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ ಕಾರಣದಿಂದ ಉತ್ತರ ಪ್ರದೇಶದ ಬಿಜೆಪಿ ಸರಕಾರ ನನ್ನ ವಿರುದ್ಧ ಸುಳ್ಳು ಜಮೀನು ವಿವಾದ ಪ್ರಕರಣಗಳನ್ನು ಸೃಷ್ಟಿಸುತ್ತಿದೆ” ಎಂದು ಖಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News