ಬಿಹಾರ ಸಿಎಂ ಕಚೇರಿ ಜಪ್ತಿಗೆ ನ್ಯಾಯಾಲಯ ಆದೇಶ

Update: 2019-07-20 15:21 GMT

ಪಾಟ್ನಾ, ಜು.20: ಬಿಹಾರ ರಾಜ್ಯ ಭೂಮಿ ವಿಕಾಸ್ ಬ್ಯಾಂಕ್ ಸಮಿತಿಗೆ ರಾಜ್ಯ ಸರಕಾರವು 664.85 ಕೋಟಿ ರೂ. ಬಾಕಿ ಉಳಿಸಿರುವ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ಕಚೇರಿ ಮತ್ತು ಅದರ ಜಮೀನನ್ನು ಜಪ್ತಿ ಮಾಡಿ ಹರಾಜು ಹಾಕುವಂತೆ ಪಾಟ್ನಾ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.

ಮುಖ್ಯಮಂತ್ರಿ ಕಚೇರಿಯಿರುವ ಸೆಕ್ರೆಟರಿಯೇಟ್ ಕಟ್ಟಡದಲ್ಲಿ ಹಲವು ಕ್ಯಾಬಿನೆಟ್ ಸಚಿವರ, ಮುಖ್ಯ ಕಾರ್ಯದರ್ಶಿಯವರ ಮತ್ತು ಗೃಹ ಕಾರ್ಯದರ್ಶಿಯವರ ಕಚೇರಿಗಳಿವೆ.

ರಾಜ್ಯ ಸರಕಾರವು ಬಾಕಿಯಿರಿಸುವ ಹಣ 493.7 ಕೋಟಿ ರೂ.ಗಳಾಗಿದ್ದು, ಬಡ್ಡಿ ಸಹಿತ 664.85 ಕೋಟಿ ರೂ.ಗಳನ್ನು ಮರುಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News