ಹಿರಿಯಡಕ: ವನಮಹೋತ್ಸವ ಕಾರ್ಯಕ್ರಮ

Update: 2019-07-20 16:43 GMT

ಉಡುಪಿ, ಜು.20:ಭೂಮಿಯ ಮೇಲಿನ ಸಕಲ ಜೀವಸಂಕುಲಕ್ಕೆ ಪ್ರಾಣವಾಯು ಸೇರಿದಂತೆ ಇತರೆ ಅಗತ್ಯತೆಯನ್ನು ಪೂರೈಸುವ ಸಸ್ಯ ಸಂಪತ್ತನ್ನು ಪ್ರತಿಯೊಬ್ಬರೂ ಪ್ರೀತಿಸಿ, ಸಂರಕ್ಷಿಸುವುದು ಜವಾಬ್ದಾರಿ ಹಾಗೂ ಅತೀ ಅಗತ್ಯದ ಕಾರ್ಯವಾಗಿದೆ. ಮನುಷ್ಯರು ಪರಿಸರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದುವ ಮೂಲಕ ಪರಿಸರವನ್ನು ಕಾಳಜಿಯಿಂದ ರಕ್ಷಿಸಬೇಕು ಎಂದು ಪರಿಸರ ಪ್ರೇಮಿ ಹಾಗೂ ಉರಗ ತಜ್ಞ ಗುುರಾಜ ಸನಿಲ್ ಕಿವಿಮಾತು ಹೇಳಿದ್ದಾರೆ.

ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿಕ್ಷೇಮ ಪಾಲನಾ ಸಮಿತಿ ಹಾಗೂ ಇತರೆ ವಿವಿಧ ಘಟಕಗಳು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಉಡುಪಿ, ನಮ್ಮ ಮನೆ-ನಮ್ಮ ಮರ ತಂಡ ಉಡುಪಿ, ಸಾಮಾಜಿಕ ವಲಯ ಅರಣ್ಯ ಕಛೇರಿ ಉಡುಪಿ ಇವರ ಸಹಬಾಗಿತ್ವದಲ್ಲಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಉಡುಪಿ ಮಲಬಾರ್‌ಗೋಲ್ಡ್‌ನ ಹಫೀಜ್ ರೆಹಮಾನ್ ಗಿಡಕ್ಕೆ ನೀರುಎರೆಯುವ ಮೂಲಕ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಪರಿಸರವನ್ನು ಹಸಿರೀಕರಣಗೊಳಿಸುವುದನ್ನು ಆದ್ಯತೆಯ ಮೇಲೆ ಪರಿಗಣಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ, ಪರಿಸರ ಪ್ರೇಮಿ ರವಿರಾಜ್ ಹೆಚ್.ಪಿ., ಉಡುಪಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ, ಮಲಬಾರ್ ಗೋಲ್ಡ್‌ನ ರಾಘವೇಂದ್ರ ನಾಯಕ್, ಉಪವಲಯ ಅರಣ್ಯಾಧಿಕಾರಿ ನವೀನ್ ಉಪಸ್ಥಿತರಿದ್ದರು.
ಸುಜಯಾ ಕೆ.ಎಸ್. ಸ್ವಾಗತಿಸಿ,ಸುಮನಾ ಬಿ. ಕಾರ್ಯಕ್ರಮ ನಿರೂಪಿಸಿದರು. ಸುಬಾಷ್ ಹೆಚ್.ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News