ಅಪರಿಚಿತ ಬಾಲಕನ ರಕ್ಷಣೆ: ಜಿಲ್ಲಾಸ್ಪತ್ರೆಗೆ ದಾಖಲು

Update: 2019-07-20 16:49 GMT

ಉಡುಪಿ, ಜು.20: ಬೈಂದೂರು ಶಿರೂರಿನ ಮೈದಿನಪುರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಾತು ಬಾರದ ಸುಮಾರು 16 ವರ್ಷದ ಪ್ರಾಯದ ಅಪರಿಚಿತ ಬಾಲಕನನ್ನು ರಕ್ಷಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಆರೋಗ್ಯದ ಸಮಸ್ಯೆ ಕಾರಣದಿಂದ ಬಾಲಕನನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಗುಣಮುಖನಾದ ಬಳಿಕ ಬಾಲಕನನ್ನು ಶಂಕರಪುರದ ವಿಶ್ವಾಸದ ಮನೆ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಲು ಅಧಿಕಾರಿಗಳು ಯೋಚಿಸಿದ್ದಾರೆಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ರೊನಾಲ್ಡ್ ಪುರ್ಟಾಡೊ, ಮುರಳಿಧರ್ ಶೆಟ್ಟಿ, ಮೋಹನ್ ಕುಮಾರ್, ಯೋಗಿಶ್ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಪಾಲ್ಗೊಂಡಿದ್ದಾರೆ. ಬಾಲಕನ ಸಂಬಂಧಿಕರು ಉಡುಪಿ ನಿಟ್ಟೂರು ಬಾಲಕಿಯರ ಬಾಲ ಮಂದಿರದ- ಮಕ್ಕಳ ಕಲ್ಯಾಣ ಸಮಿತಿ ಕಛೇರಿ, ಅಥವಾ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸಲು ಕೊರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News