ಉತ್ತರಪ್ರದೇಶದ ಬಿಜೆಪಿ ಸರಕಾರ ಸರ್ವಾಧಿಕಾರದತ್ತ ವಾಲುತ್ತಿದೆ: ರಾಹುಲ್ ಗಾಂಧಿ

Update: 2019-07-20 17:29 GMT

ಹೊಸದಿಲ್ಲಿ, ಜು. 20: ಉತ್ತರಪ್ರದೇಶದ ಬಿಜೆಪಿ ಸರಕಾರ ‘ಸರ್ವಾಧಿಕಾರದತ್ತ ವಾಲುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ. ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಬಂಧಿಸಿ ಚುನಾರ್ ಅತಿಥಿಗೃಹದಲ್ಲಿ ಇರಿಸಿರುವುದು ಪ್ರಜಾಪ್ರಭುತ್ವವನ್ನು ತುಳಿಯುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.

ಸೋನ್‌ಭದ್ರಾ ಘಟನೆಯ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ತೆರಳುತ್ತಿದ್ದ ಸಂದರ್ಭ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಂಧಿಸಲಾಗಿತ್ತು. ಅನಂತರ ಅವರನ್ನು ಚುನಾರ್ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ನೀರು ಹಾಗೂ ವಿದ್ಯುತ್ ಇಲ್ಲದೆ ಅವರು ರಾತ್ರಿ ಅಲ್ಲೇ ಕಳೆದರು. ಇದು ಉತ್ತರಪ್ರದೇಶ ಸರಕಾರ ಪ್ರಜಾಪ್ರಭುತ್ವವನ್ನು ತುಳಿಯುವ ಪ್ರಯತ್ನ ಎಂದು ರಾಹುಲ್ ಗಾಂಧಿ ಹಿಂದಿ ಭಾಷೆಯಲ್ಲಿ ಮಾಡಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಇಂತಹ ತಂತ್ರಗಳಿಗೆ ಹೆದರದು ಹಾಗೂ ದಲಿತರು, ಬುಡಕಟ್ಟು ಜನರ ಪರವಾದ ಹೋರಾಟವನ್ನು ನಿಲ್ಲಿಸದು ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News