ವಿಠಲ ಪದವಿಪೂರ್ವ ಕಾಲೇಜಿಗೆ ಮಲ್ಟಿಜಿಮ್ ಘಟಕ ಕೊಡುಗೆ

Update: 2019-07-20 18:48 GMT

ಬಂಟ್ವಾಳ, ಜು. 20: ಆರೋಗ್ಯಕರ ಜೀವನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿದ್ದು, ತಾಳ್ಮೆ, ಪರಿಣತ ತರಬೇತುದಾರರಿಂದ ವಿದ್ಯಾರ್ಥಿಯ ಯಶಸು ಸಾಧ್ಯ ಎಂದು ಸಾಣೂರು ಪ್ರಕೃತಿ ಸಮೂಹ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹಾಗೂ ವಿಠಲ ವಿದ್ಯಾ ಸಂಸ್ಥೆಯ ಹಳೆವಿದ್ಯಾರ್ಥಿ ಅಶೋಕ್ ಕುಮಾರ್ ಹೇಳಿದ್ದಾರೆ. 

ಅವರು ವಿಠಲ ಪದವಿಪೂರ್ವ ಕಾಲೇಜಿಗೆ ಕೊಡುಗೆಯಾಗಿ ನೀಡಿದ ಮಲ್ಟಿ ಜಿಮ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಹ ಸದೃಢವಾಗಿದರೆ ಮನಸು ಸದೃಢವಾಗಿರುತ್ತದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಐಎಸ್‍ಒನ ಮನೋಹರ ಪ್ರಭು, ಸಂಸ್ಥೆಯ ಸಂಚಾಲಕ ಎಲ್.ಎನ್ ಕೂಡೂರು, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರಾದ ಬಾಬು ಕೆ.ವಿ, ಪದ್ಮಯ್ಯ ಗೌಡ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಮೂಡಬಿದಿರೆಯ ಜಿಮ್ ತರಬೇತುದಾರ ವಿಜಯ್, ವಿಟ್ಲ ಸುಪ್ರಜಿತ್ ಐಟಿಐನ ಕಾರ್ಯದರ್ಶಿ ಪ್ರಕಾಶ್ ಕುಕ್ಕಿಲ, ನಿವೃತ್ತ ಪ್ರಾಂಶುಪಾಲ ರಘುರಾಮ್ ಶಾಸ್ತ್ರಿ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News