ಸಂಸ್ಕೃತ ಕಲಿತಿಲ್ಲ ಎಂದು ಅಂಬೇಡ್ಕರ್ ಕೂಡ ವಿಷಾದಿಸಿದ್ದರು: ಆರೆಸ್ಸೆಸ್ ನಾಯಕ ಮೋಹನ್ ಭಾಗವತ್

Update: 2019-07-21 08:37 GMT

ನಾಗ್ಪುರ, ಜು.21: ಸಂಸ್ಕೃತ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಬುಡಕಟ್ಟು ಭಾಷೆಗಳೂ ಸೇರಿ ದೇಶದಲ್ಲಿರುವ ಎಲ್ಲಾ ಭಾಷೆಗಳಲ್ಲಿ 30 ಶೇ. ಸಂಸ್ಕೃತ ಪದಗಳಿವೆ ಎಂದ ಅವರು, ತನಗೆ ಸಂಸ್ಕೃತ ಕಲಿಯಲು ಅವಕಾಶ ಸಿಗಲಿಲ್ಲ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಷಾದಿಸಿದ್ದರು ಎಂದು ಹೇಳಿದರು.

“ಸಂಸ್ಕೃತವು ಜ್ಞಾನದ ಭಾಷೆಯಾಗಿದೆ. ಪ್ರಾಚೀನ ಖಗೋಳವಿಜ್ಞಾನ, ಕೃಷಿ ಮತ್ತು ಆಯುರ್ವೇದಗಳ ಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಮಾತ್ರ ಪಡೆಯಬಹುದಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News