ಜು.27,28: ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

Update: 2019-07-21 11:55 GMT

ಭಟ್ಕಳ: ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜು. 27 ಮತ್ತು 28 ರಂದು ಉಚಿತ ಹೃದ್ರೋಗ್ರ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದ್ದು ಭಟ್ಕಳದ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮೈತ್ರಾ ಆಸ್ಪತ್ರೆಯ ಬ್ಯುಸಿನೆಸ್ ಡೆವಲೆಪ್ಮೆಂಟ್ ಮುಖ್ಯಸ್ಥ ಮುರುಳಿ ಥರಾವತ್ ತಿಳಿಸಿದ್ದಾರೆ.

ಅವರು ರವಿವಾರ ಹೊಟೇಲ್ ರಾಯಲ್ ಓಕ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.

ಈ ಶಿಬಿರದಲ್ಲಿ ದೇಶದ ನಂಬರ್ ಒನ್ ಹೃದ್ರೋಗತಜ್ಞ  ಮೈತ್ರಾ ಆಸ್ಪತ್ರೆಯ ನಿರ್ದೇಶಕ ಹಾಗು ವೈದ್ಯಕೀಯ ಸೇವೆಗಳ ಪ್ರಮುಖ ಡಾ. ಅಲಿ ಫೈಝಲ್ ತಮ್ಮ ಸೇವೆಯನ್ನು ನೀಡುತ್ತಿದ್ದು ಇವರೊಂದಿಗೆ ಕನ್ಸಲ್ಟೆಂಟ್ ಕಾರ್ಡಿಯೋಲೊಜಿಸ್ಟ್ ಡಾ. ಶಜಾವುದ್ದಿನ್ ಹಾಗೂ ಅವರ ತಾಂತ್ರಿಕ ತಂಡದ ಸದಸ್ಯರ ಸೇವೆಯು ಲಭ್ಯವಾಗಲಿದೆ. ಸಾರ್ವಜನಿಕರು ಇದರ ಸದೂಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಯಾರು ಮೊದಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೋ ಅವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದರು.

ಶಿಬಿರದಲ್ಲಿ ರಕ್ತ ತಪಾಸಣೆ, ಇಸಿಜಿ, ಇಸಿಎಚ್ಒ ಸೇರಿದಂತೆ ವಿವಿಧ ಹೃದ್ರೋಗಕ್ಕೆ ಸಂಬಂಧಿಸಿದ ಕಾಯಿಲೆಗೆ ಉಚಿತ ಪರೀಕ್ಷೆಯನ್ನು ಕೈಗೊಂಡು ಸೂಕ್ತ ಸಲಹೆ ನೀಡಲಾಗುವುದು. ಈಗಾಗಲೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದವರು ತಮ್ಮ ಹಿಂದಿನ ವೈದ್ಯರ ಫೈಲ್ ನ್ನು ಶಿಬಿರದಲ್ಲಿ ಬರುವಾಗ ತರಬೇಕೆಂದು ಅವರು ತಿಳಿಸಿದ್ದಾರೆ. ಜು.27 ರಂದು ಬೆಳಿಗ್ಗೆ 11;೦೦ ಗಂಟೆಗೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಜು.28 ರಂದು ಮಧ್ಯಾಹ್ನ 1 ಗಂಟೆ ವರೆಗೆ ಶಿಬಿರ ನಡೆಯುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News