2019ರ ಚುನಾವಣೆ ‘ನಿಗೂಢತೆ’ ಹೊರತು ಇತಿಹಾಸವಲ್ಲ: ಮಮತಾ

Update: 2019-07-21 13:57 GMT

ಕೋಲ್ಕತಾ, ಜು.21: ಬಿಜೆಪಿಯು ಹಣ, ಪೊಲೀಸ್ ಹಾಗೂ ಇವಿಎಂ ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಬೇರೂರಲು ಪ್ರಯತ್ನಿಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. 2019ರ ಲೋಕಸಭಾ ಚುನಾವಣೆ ‘ಹಿಸ್ಟರಿ(ಐತಿಹಾಸಿಕ)ಯಲ್ಲ, ಅದೊಂದು ಮಿಸ್ಟರಿ (ರಹಸ್ಯ) ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪೊಲೀಸ್ ಹುತಾತ್ಮ ದಿನಾಚರಣೆಯ ಬಳಿಕ ಕೋಲ್ಕತಾದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮಮತಾ, ಕೆಲವು ಬಿಜೆಪಿ ಮುಖಂಡರು ಟಿಎಂಸಿ ಮುಖಂಡರನ್ನು ಬಸ್ಸಿಂದ ಹೊರಗೆಳೆಯಿರಿ ಎಂದು ಹೇಳಿಕೆ ನೀಡಿದ್ದರು. ನಾವು ಕೂಡಾ ಇದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿದರೆ ಅವರಿಗೆ ಅದನ್ನು ತಾಳಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹೋರಾಟ ನೀಡಲು ಸಾಧ್ಯವೇ. ಅಷ್ಟಕ್ಕೂ ಇಲ್ಲಿ ಯಾರೊಬ್ಬರಿಗೂ ಬಿಜೆಪಿಯ ಬಗ್ಗೆ ತಿಳಿದಿಲ್ಲ. ಕೇವಲ ಆರೆಸ್ಸೆಸ್‌ನ ಗೂಂಡಾಗಳು ಶಾಲೆಗಳಲ್ಲಿ ತಮ್ಮ ಕೊಳಕು ಕಾರ್ಯ ನಡೆಸುತ್ತಾ ಇದ್ದಾರೆ. ಆದ್ದರಿಂದಲೇ ಬಿಹಾರ ಸರಕಾರ ರಾಜ್ಯದಲ್ಲಿ ಆರೆಸ್ಸೆಸ್‌ನ ಚಟುವಟಿಕೆಯ ಮೇಲೆ ನಿಗಾ ಇರಿಸುವಂತೆ ಪೊಲೀಸರಿಗೆ ಸೂಚಿಸಿದೆ. ನಾವು ಪೊಲೀಸರಿಗೆ ಸೂಚಿಸಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದವರು ಬಿಜೆಪಿಗೆ ಎಚ್ಚರಿಕೆ ನೀಡಿದರು.

ಪ.ಬಂಗಾಳದಲ್ಲಿ ನಡೆದಿದ್ದ ಪಂಚಾಯತ್ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ ಎಂಬ ವರದಿಯನ್ನು ಪ್ರಸ್ತಾಪಿಸಿದ ಅವರು, ಇದು ಮಾಧ್ಯಮದವರು ಸೃಷ್ಟಿಸಿದ ಗೊಂದಲ. ತ್ರಿಪುರಾದಲ್ಲಿ ನಡೆದ ಚುನಾವಣೆಯಲ್ಲಿ ಶೇ.86ರಷ್ಟು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಆಗ ಮಾಧ್ಯಮದವರು ಯಾಕೆ ಸೊಲ್ಲೆತ್ತಿಲ್ಲ ಎಂದು ಪ್ರಶ್ನಿಸಿದರು.

ಟಿಎಂಸಿ ಮುಖಂಡರು ಲಂಚದ ರೂಪದಲ್ಲಿ ಪಡೆದಿರುವ ಹಣವನ್ನು ಮರಳಿಸಬೇಕು ಎಂಬ ಬಿಜೆಪಿಯವರ ಆಗ್ರಹದ ಬಗ್ಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ ಮಮತಾ, ಮೊದಲು ಬಿಜೆಪಿಯವರು ಆಶ್ವಾಸನೆ ನೀಡಿದ 15 ಲಕ್ಷ ರೂ. ಕಾಳಧನವನ್ನು ಮರಳಿಸಲಿ ಎಂದರು. ಬಿಜೆಪಿಯವರು ಅತೀ ದೊಡ್ಡ ಡಕಾಯಿತರು. ನೋಟು ರದ್ದತಿಯಿಂದ ಪಡೆದ ಕಪ್ಪುಹಣದಿಂದ ದೇಶದೆಲ್ಲೆಡೆ ಕಚೇರಿಯನ್ನು ಆರಂಭಿಸಿದ್ದಾರೆ. ಈ ಹಣವನ್ನು ನಮಗೆ ಮರಳಿಸಿ ಎಂದು ಮಮತಾ ವಿವಾದಾತ್ಮಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News