ಶಾಸಕರು ಜನರ ಸಮಸ್ಯೆಗಳತ್ತ ಗಮನ ಹರಿಸಲಿ

Update: 2019-07-21 17:37 GMT

 ಮಾನ್ಯರೇ,
      
ರಾಜ್ಯದ ರಾಜಕೀಯದಲ್ಲಿ ರಾಜೀನಾಮೆಯ ಗೊಂದಲ ಮುಗಿಯದ ರಂಪಾಟವಾಗಿದೆ. ಸಮ್ಮಿಶ್ರ ಸರಕಾರದ ಸಚಿವರು ಅತೃಪ್ತ ಶಾಸಕರನ್ನು ತೃಪ್ತಿಗೊಳಿಸಲು ಪಡಬಾರದ ಕಷ್ಟಪಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಶಾಸಕರು ಮುಂಬೈ-ಬೆಂಗಳೂರಿನ ರೆಸಾರ್ಟ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ರೈತರು ಮಳೆ ಬೆಳೆಯಿಲ್ಲದೆ ಆತಂಕದ ಸ್ಥಿತಿಯಲ್ಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಚುನಾಯಿತರಾದವರು ಮತದಾರರ ಬಗ್ಗೆ ಯೋಚಿಸದೆ ರಾಜೀನಾಮೆ ನೀಡಿ ರಾಜ್ಯದ ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅತೃಪ್ತ ಶಾಸಕರು ವಿಧಾನಸಭೆಯ ಕಲಾಪಕ್ಕೂ ಹಾಜರಾಗದೆ ಮುಂಬೈನ ಹೊಟೇಲೊಂದರಲ್ಲಿ ಕುಳಿತುಕೊಂಡಿದ್ದಾರೆ. ಸಮ್ಮಿಶ್ರ ಸರಕಾರದ ನಾಯಕರ ಮಾತಿಗೂ ಬೆಲೆ ಕೊಡದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತಿದೆ. ಶಾಸಕರ ಈ ನಡೆಯ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ. ಇದಕ್ಕೆ ಪರಿಹಾರ ಸಿಗುವುದಾದರೂ ಯಾವಾಗ? ತಕ್ಷಣ ಇದಕ್ಕೊಂದು ಪರಿಹಾರ ಕ್ರಮ ಕೈಗೊಂಡು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಆಗಿಲ್ಲ. ಅತ್ತ ಕಡೆ ಗಮನ ಹರಿಸಿ ಮೋಡ ಬಿತ್ತನೆಗೆ ಮುಂದಾಗಬೇಕು.  

Writer - ಸದ್ದಾಂ ಹುಸೇನ ಬಿ. ಬಳಗಾನೂರ

contributor

Editor - ಸದ್ದಾಂ ಹುಸೇನ ಬಿ. ಬಳಗಾನೂರ

contributor

Similar News