ಕಲ್ಲಡ್ಕ ಟಿಕ್ಕಾ ಪೋಯಿಂಟ್ ವತಿಯಿಂದ ರಕ್ತದಾನ ಶಿಬಿರ

Update: 2019-07-21 18:32 GMT

ವಿಟ್ಲ: ಕಲ್ಲಡ್ಕದ ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಜುಲೈ ರಂದು ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಕಲ್ಲಡ್ಕ ಪ್ರೀತಿ ಕಾಂಪ್ಲೆಕ್ಸ್ ಬಳಿಯ ಗಂಗಾಧರ ಸಂಕೀರ್ಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಮಾತನಾಡಿ, ರಕ್ತದಾನವು ಜೀವದಾನ ಮಾಡಿದಷ್ಟೇ ಪುಣ್ಯ ಹಾಗೂ ಶ್ರೇಷ್ಠ ಕಾರ್ಯವಾಗಿದ್ದು ರಕ್ತದಾನಿಗಳನ್ನು ಜೀವದಾನಿಗಳು ಎಂದು ಸಂಭೋದಿಸಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅದ್ಯಕ್ಷ ಕೆ.ಪದ್ಮನಾಭ ರೈ ಮಾತನಾಡಿ ಜಾತಿ, ಮತ, ಧರ್ಮದ ಭೇದ ಬಾವವಿಲ್ಲದೆ ಮಾಡುವ ಮಾಡುವ ರಕ್ತದಾನದಂತಹ ಪುಣ್ಯ ಕಾರ್ಯಗಳಿಂದ ಮಾನವೀಯ ಮೌಲ್ಯಗಳು ಜಗತ್ತಿನೆಲ್ಲೆಡೆ ನೆಲೆನಿಲ್ಲುವಂತಾಗಲಿ ಎಂದರು.

ಹಜಾಜ್ ಸಮೂಹ ಸಂಸ್ಥೆಯ ಪಾಲುದಾರರು ಹಾಜಿ ಜಿ ಯೂಸುಫ್ ಗೋಳ್ತಮಜಲು, ಕಲ್ಲಡ್ಕ ಪ್ರೀತಿ ಕಾಂಪ್ಲೆಕ್ಸ್ ಮಾಲಕ ಶಾಂತರಾಮ ಶೆಟ್ಟಿ, ಬಿ.ಮೂಡ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಮಾಸ್ಟರ್, ಗೋಳ್ತಮಜಲು ಗ್ರಾ.ಪಂ. ಸದಸ್ಯ ಯೂಸುಫ್ ಹೈದರ್,ಪ್ರಮುಖರಾದ ಕೆ.ಎನ್.ನವಾಝ್ ಕಲ್ಲಡ್ಕ, ಇಂಜಿನಿಯರ್ ಇಮ್ರಾನ್ ಕಲ್ಲಡ್ಕ, ಜಿ.ಎಸ್.ಸಿದ್ದೀಕ್ ಫ್ಯಾಶನ್ ಪ್ರೈಡ್, ರಫೀಕ್ ಮಾಸ್ಟರ್, ಸಜ್ಜಾದ್ ಝಮಾನ್ ಕಲ್ಲಡ್ಕ, ಜೆ.ಕೆ.ಜವಾಝ್ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಬ್ಲಡ್ ಡೋನರ್ಸ್ ಅದ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಾರ್ಯನಿರ್ವಾಹಕ ಫಾರೂಕ್ ಬಿಗ್ ಗ್ಯಾರೇಜ್, ಸದಸ್ಯರಾದ ದಾವೂದ್ ಬಜಾಲ್, ಮನ್ಸೂರ್ ಸೂರಜ್, ಕಲ್ಲಡ್ಕ ಟಿಕ್ಕಾ ಪಾಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಲಹೆಗಾರ ಅಶ್ರಫ್ ಅಸುರು, ಹಾರಿಸ್ ಅಮರ್, ಅದ್ಯಕ್ಷ ಅಫ್ರಿದ್ ಮಿಲಾದ್‌‌‌, ಬುಟ್ಟೋ ಫಾರೂಕ್, ಜೈದ್ ಕಲ್ಲಡ್ಕ, ಮೊದಲಾದವರು ಉಪಸ್ಥಿತರಿದ್ದರು.

ಹಲವಾರು ಬಾರಿ ರಕ್ತದಾನ ಮಾಡಿದ ರಕ್ತದಾನಿ ಹಕೀಂ ಕಲ್ಲಡ್ಕ ಹಾಗೂ ಕಲ್ಲಡ್ಕದ ರಕ್ತದಾನಿಗಳಾದ ಏಳು ಮಂದಿ ಒಡಹುಟ್ಟಿದ ಸಹೋದರರು ಹೈದರ್, ಇಕ್ಬಾಲ್, ರಿಯಾಝ್, ಮುನಾಝ್, ನವಾಝ್, ರಶೀದ್ ಬಾಬ, ಜುನೈದ್ ಅವರನ್ನು ಸನ್ಮಾನಿಸಲಾಯಿತು.

ಟಿಕ್ಕಾ ಪಾಯಿಂಟ್ ಸಲಹೆಗಾರ, ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಸದಸ್ಯ ಶಾಫಿ ಕಲ್ಲಡ್ಕ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News