×
Ad

ಚಂದ್ರಯಾನ -2 ಗಗನನೌಕೆ ಯಶಸ್ವಿ ಉಡಾವಣೆ

Update: 2019-07-22 14:45 IST

ಹೊಸದಿಲ್ಲಿ, ಜು.22: ಭಾರತದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಚಂದ್ರಯಾನ -2 ಗಗನನೌಕೆಯನ್ನು ಇಂದು ಮಧ್ಯಾಹ್ನ 2:43ಕ್ಕೆ ಉಡಾಯಿಸಲಾಯಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಮೂಲಕ  ಉಡಾಯಿಸಲಾಯಿತು.

ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದ್ದು,  ಇದು ಚಂದ್ರನ ದಕ್ಷಿಣ ಗೋಳಾರ್ಧವನ್ನು ಅಧ್ಯಯನ ಮಾಡಲಿದೆ. 

ಸ್ವದೇಶಿ ನಿರ್ಮಿತ ಚಂದ್ರಯಾನ -1 ಯೋಜನೆ ಯಶಸ್ವಿಯಾಗಿತ್ತು. ಇದೀಗ 10 ವರ್ಷಗಳ ಬಳಿಕ ಚಂದ್ರಯಾನ-2  ಉಡಾಯಿಸಲಾಯಿತು. ಮೊದಲು ಜುಲೈ 15ರಂದು ಉಪಗ್ರಹ ಉಡಾಯಿಸುವುದು ನಿಗದಿಯಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಇದನ್ನು ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News