×
Ad

ತನ್ನ ಜೀವದ ಹಂಗು ತೊರೆದು ನದಿಗೆ ಹಾರಿ ಯುವಕನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ: ವಿಡಿಯೋ ವೈರಲ್

Update: 2019-07-22 16:34 IST

ಹೊಸದಿಲ್ಲಿ, ಜು.22: ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ತನ್ನ ಜೀವದ ಹಂಗು ತೊರೆದು ರಕ್ಷಿಸಿದ ಉತ್ತರಾಖಂಡ ಪೊಲೀಸ್ ಅಧಿಕಾರಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ. ಈ ಘಟನೆಯ ವೀಡಿಯೋ ಕೂಡ ವೈರಲ್ ಆಗಿದೆ. ಉತ್ತರಾಖಂಡ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ಸಾಹಸಮಯ ವಿಡಿಯೋ ಶೇರ್ ಮಾಡಿದೆ.

ಹರ್ಯಾಣದ ನಿವಾಸಿ ವಿಶಾಲ್ ಎಂಬವರು ಹರಿದ್ವಾರದ ಕಂಗ್ರಾ ಘಾಟ್ ನಲ್ಲಿ ಸ್ನಾನ ಮಾಡಲೆಂದು ನದಿಗಿಳಿದಿದ್ದರು. ಆದರೆ ನೀರಿನ ರಭಸ ಕೂಡ ಜೋರಾಗಿದ್ದುದರಿಂದ ಇನ್ನೇನು ಅವರು ಕೊಚ್ಚಿ ಹೋಗುತ್ತಾರೆನ್ನುವಷ್ಟರಲ್ಲಿ ಮುಳುಗುತ್ತಿರುವ ಆತನನ್ನು ಗಮನಿಸಿದ ಪೊಲೀಸ್ ಅಧಿಕಾರಿ ಸನ್ನಿ ನೀರಿಗೆ ಧುಮುಕಿ ಆ ವ್ಯಕ್ತಿಯನ್ನು ದಡಕ್ಕೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News