ಸಿರಿಯ: ರಶ್ಯದ ವೈಮಾನಿಕ ದಾಳಿಯಲ್ಲಿ 23 ನಾಗರಿಕರು ಮೃತ್ಯು

Update: 2019-07-22 14:34 GMT

ಸಿರಿಯ, ಜು. 22: ವಾಯುವ್ಯ ಸಿರಿಯದ ಮಾರುಕಟ್ಟೆಯೊಂದರ ಮೇಲೆ ರಶ್ಯ ಸೋಮವಾರ ನಡೆಸಿದ ವಿಮಾನ ದಾಳಿಗಳಲ್ಲಿ 23 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಆದಾಗ್ಯೂ, ಈ ಹತ್ಯೆಗಳಿಗೆ ತಾನು ಕಾರಣ ಎನ್ನುವುದನ್ನು ರಶ್ಯ ನಿರಾಕರಿಸಿದೆ.

ಬಂಡುಕೋರರ ಹಿಡಿತದಲ್ಲಿರುವ, ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿರುವ ಇದ್ಲಿಬ್ ರಾಜ್ಯದ ಮೇಲೆ ಸಿರಿಯದ ಸರಕಾರಿ ಪಡೆಗಳು ಮತ್ತು ಅದರ ಮಿತ್ರದೇಶ ರಶ್ಯ ಎಪ್ರಿಲ್‌ನಿಂದ ದಾಳಿ ನಡೆಸುತ್ತಿದೆ.

ಹಿಂಸಾಚಾರದಲ್ಲಿ 650ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಎರಡು ಡಝನ್‌ಗೂ ಅಧಿಕ ಆರೋಗ್ಯ ಸುರಕ್ಷತಾ ಕೇಂದ್ರಗಳು ಧ್ವಂಸಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News