×
Ad

“ಪ್ರತಿದಿನ ನಾನು ಕಲಿಮ ಹೇಳುತ್ತೇನೆ”: ಕೇಂದ್ರ ಸಚಿವ ಪಿಯೂಷ್ ಗೋಯಲ್ ರ ಹಳೆಯ ವಿಡಿಯೋ ವೈರಲ್

Update: 2019-07-22 20:51 IST

ಹೊಸದಿಲ್ಲಿ, ಜು.22: “ಪ್ರತಿದಿನ ನಾನು ಪೂಜೆ ಮಾಡುವುದಕ್ಕೂ ಮೊದಲು ‘ಕಲಿಮ’ ಹೇಳುತ್ತೇನೆ” ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳುತ್ತಿರುವ 2016ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ವೈರಲ್ ಆಗುತ್ತಿದೆ.

@TheSameerAbbas  ಎನ್ನುವ ಟ್ವಿಟರ್ ಖಾತೆಯು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಹಲವರು ರಿಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವರ ಈ ವಿಡಿಯೋ ವೀಕ್ಷಿಸಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಪ್ರಶಂಸಿಸಿದ್ದಾರೆ.

2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪಿಯೂಷ್ ಗೋಯಲ್ ಈ ಮಾತುಗಳನ್ನಾಡಿದ್ದರು. ಅವರ ಮಾತುಗಳು ಈ ರೀತಿಯಿದೆ. “ನಾನು ಕುರ್ ಆನ್ ಓದಿದ್ದೇನೆ. ಬೆಳಗ್ಗೆ ನಾನು ಪೂಜೆ ಮಾಡುವಾಗ ‘ಲಾ ಇಲಾಹ ಇಲ್ಲಲ್ಲಾಹ್, ಮುಹಮ್ಮದುರ್ರಸೂಲಲ್ಲಾಹ್ ಎಂದು ಹೇಳುತ್ತೇನೆ”. ವೈರಲ್ ಆಗಿರುವ ವಿಡಿಯೋ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News