×
Ad

ವಿಶ್ವಸಂಸ್ಥೆಯ ಪರಮಾಣು ಸಂಸ್ಥೆಯ ಮುಖ್ಯಸ್ಥ ನಿಧನ

Update: 2019-07-22 22:25 IST

ವಿಯೆನ್ನಾ (ಆಸ್ಟ್ರಿಯ), ಜು. 22: ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯಾಗಿರುವ ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ಮುಖ್ಯಸ್ಥ ಯುಕಿಯ ಅಮಾನೊ ನಿಧನರಾಗಿದ್ದಾರೆ ಎಂದು ಐಎಇಎ ಸೋಮವಾರ ತಿಳಿಸಿದೆ.

ಯಾವುದೋ ಕಾಯಿಲೆಯಿಂದಾಗಿ ಅವರು ಅಧಿಕಾರದಿಂದ ಕೆಳಗಿಳಿಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಈ ಮರಣ ಸಂಭವಿಸಿದೆ.

72 ವರ್ಷದ ಜಪಾನ್ ಪ್ರಜೆಯಾಗಿರುವ ಅವರು ಐಎಇಎಯ ಮಹಾ ನಿರ್ದೇಶಕರಾಗಿ 2009ರಿಂದ ಕಾರ್ಯನಿರ್ವಹಿಸುತ್ತಿದ್ದರು. ಅವರು ಮುಹಮ್ಮದ್ ಎಲ್ಬರಾಡಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಾದಗಳನ್ನು ಈ ಅವಧಿಯಲ್ಲಿ ಅವರ ನೇತೃತ್ವದ ಸಂಸ್ಥೆ ನಿಭಾಯಿಸಿತ್ತು.

ಅವರು ನಾಲ್ಕು ವರ್ಷಗಳ ಅವಧಿಯ ಮೂರನೇ ಅವಧಿಯಲ್ಲಿದ್ದರು. ಅವರ ಪ್ರಸಕ್ತ ಅವಧಿ 2021 ನವೆಂಬರ್ 30ರಂದು ಮುಗಿಯಲಿತ್ತು. ಅವರು ಮಾರ್ಚ್‌ನಲ್ಲೇ ತನ್ನ ಹುದ್ದೆಯಿಂದ ಕೆಳಗಿಳಿಯಲು ಸಿದ್ಧತೆಗಳನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News