ಉತ್ತರಪ್ರದೇಶ: ಮಿಂಚಿಗೆ 33 ಜನರು ಬಲಿ

Update: 2019-07-22 17:40 GMT

ಕಾನ್ಪುರ, ಜು. 22: ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮಿಂಚಿನ ಆಘಾತಕ್ಕೆ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ. ಮಿಂಚಿಗೆ 33 ಮಂದಿ ಹಾಗೂ ಧಾರಾಕಾರ ಮಳೆ ಸುರಿದು ನೆರೆಯಲ್ಲಿ ತೇಲಿ ಬಂದ ಹಾವು ಕಚ್ಚಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಮಳೆ ಸಂಬಂಧಿ ದುರ್ಘಟನೆಗಳಿಂದ 13 ಮಂದಿ ಗಾಯಗೊಂಡಿದ್ದಾರೆ. 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ ಎಂದು ರಾಜ್ಯ ಸರಕಾರದ ವಕ್ತಾರರು ತಿಳಿಸಿದ್ದಾರೆ. ಫತೇಪುರದಲ್ಲಿ 7, ಝಾನ್ಸಿಯಲ್ಲಿ 5, ಜಲೌನ್‌ನಲ್ಲಿ 4, ಹಮೀರ್‌ಪುರದಲ್ಲಿ 3, ಗಾಝಿಯಾಬಾದ್‌ನಲ್ಲಿ ಇಬ್ಬರು ಹಾಗೂ ದಿಯೋರಿಯಾ, ಕುಶೀನಗರ್, ಜೌನ್‌ಪುರ, ಅಂಬೇಡ್ಕರ್ ನಗರ, ಪ್ರತಾಪ್‌ಗಢ, ಕಾನ್ಪುರ ದೆಹಾತ್, ಚಿತ್ರಕೂಟದಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗೆ ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News