×
Ad

ತ್ರಿಪುರಾ: 6 ಪರಿಹಾರ ಕೇಂದ್ರಗಳಲ್ಲಿ 26,128 ಬ್ರೂ ವಲಸಿಗರ ಮರು ಗುರುತು

Update: 2019-07-22 23:11 IST

ಐಜೋಲ್, ಜು. 22: ಉತ್ತರ ತ್ರಿಪುರಾ ಜಿಲ್ಲೆಗಳ ಆರು ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಇದ್ದ 4,278 ಕುಟುಂಬಗಳಿಗೆ ಸೇರಿದ 26,128 ಬ್ರೂ ವಲಸಿಗರನ್ನು ಅಧಿಕಾರಿಗಳು ಮರು ಗುರುತಿಸುತ್ತಿದ್ದಾರೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಲಾಲ್‌ಬಿಯಾಕ್ಚಮಾ ತಿಳಿಸಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಇದ್ದ ಬ್ರೂ ವಲಸಿಗರ ವಾಪಸಾತಿ ಪ್ರಕ್ರಿಯೆಯ ಭಾಗವಾಗಿ ಆರಂಭಿಸಲಾಗಿದ್ದ ಮಿಝೊರಾಂನ ಪ್ರಾಮಾಣಿಕ ನಿವಾಸಿಗಳ ಮರು ಗುರುತಿಸುವಿಕೆ ಜುಲೈ 30ಕ್ಕೆ ಪೂರ್ಣಗೊಂಡಿದೆ.

ತ್ರಿಪುರಾದಿಂದ ಹಿಂದಿರುಗಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಂಕಿ-ಅಂಶಗಳ ಅಂತಿಮ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. 1997ರಲ್ಲಿ ಜನಾಂಗಿಯ ಕಲಹದ ಸಂದರ್ಭ ಬ್ರೂ ಸಮದಾಯದ ಜನರು ತ್ರಿಪುರಾದಿಂದ ಪರಾರಿಯಾಗಿದ್ದು, ಹಿಂದಿರುಗಲು ಬಯಸುವವರ ಅಂಕಿ-ಅಂಶಗಳ ಲೆಕ್ಕಾಚಾರವನ್ನು ಮಾಮಿತ್, ಕೊಲಾಸಿಬ್ ಹಾಗೂ ಲುಗ್ಲೈ ಜಿಲ್ಲೆಗಳ ಅಧಿಕಾರಿಗಳು ನಡೆಸುತ್ತಿದ್ದಾರೆ. ಎರಡನೇ ಹಂತದ ಗುರುತಿಸುವಿಕೆಯನ್ನು ಜುಲೈ 3ರಿಂದ ಆರಂಭಿಸಲಾಗಿತ್ತು. ಜುಲೈ 30ಕ್ಕೆ ಪೂರ್ಣಗೊಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ನವೆಂಬರ್ ಅಂತ್ಯದಲ್ಲಿ ನಡೆಸಿದ ತಲೆ ಲೆಕ್ಕಾಚಾರದಲ್ಲಿ ಉತ್ತರ ತ್ರಿಪುರಾದ ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ 5,407 ಕುಟುಂಬಗಳಿಗೆ ಸೇರಿದ 32,876 ಬ್ರೂಗಳು ಪತ್ತೆಯಾಗಿದ್ದರು ಎಂದು ಲಾಲ್‌ಬಿಯಾಕ್ಚಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News