ಮಾಲೆಗಾಂವ್ ಸ್ಫೋಟ ಪ್ರಕರಣ: ಸಂಕ್ಷಿಪ್ತಗೊಳಿಸದ ಸಾಕ್ಷಿಗಳ ಹೇಳಿಕೆ ಕೋರಿದ ಬಾಂಬೆ ಹೈಕೋರ್ಟ್

Update: 2019-07-22 17:48 GMT

ಮುಂಬೈ, ಜು. 22: ಆರೋಪ ಪಟ್ಟಿಯ ಒಂದು ಭಾಗವಾದ ಸಂಕ್ಷಿಪ್ತಗೊಳಿಸದ ಸಾಕ್ಷಿಗಳ ಹೇಳಿಕೆಯನ್ನು ಕೋರಿ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾದ ಪ್ರಸಾದ್ ಪುರೋಹಿತ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಆಗಸ್ಟ್ 2ಕ್ಕೆ ಮುಂದೂಡಿದೆ.

ಆರೋಪಿ ಸಲ್ಲಿಸಿದ ಮನವಿಯ ಕುರಿತು ನಿರ್ಧರಿಸಲು ಒಂದು ವಾರಗಳ ಸಮಯಾವಕಾಶವನ್ನು ಎನ್‌ಐಎ ಪರ ವಕೀಲರು ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಇಂದ್ರಜಿತ್ ಮೊಹಾಂತಿ ಹಾಗೂ ನ್ಯಾಯಮೂರ್ತಿ ಎ.ಎಂ. ಬದರ್ ಅವರನ್ನು ಒಳಗೊಂಡು ವಿಭಾಗೀಯ ನ್ಯಾಯಪೀಠ ವಿಚಾರಣೆ ಮುಂದೂಡಿದೆ. 26/11ರ ಮುಂಬೈ ದಾಳಿ ಹಾಗೂ 1993ರ ಮುಂಬೈ ಸ್ಫೋಟದ ಸಾಕ್ಷಿಗಳ ಹೆಸರನ್ನು ನೀಡಲಾಗಿತ್ತು. ಕಸಬ್‌ಗೆ ಕೂಡ ಸಾಕ್ಷಿಗಳ ಸಂಕ್ಷಿಪ್ತಗೊಳಿಸದ ಪಟ್ಟಿಯನ್ನು ನೀಡಲಾಗಿತ್ತು.

 ನಾವು ಯಾಕೆ ಪಡೆಯಲು ಸಾಧ್ಯವಿಲ್ಲ? ಎಂದು ಪುರೋಹಿತ್ ಪರ ವಕೀಲ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ತನ್ನನ್ನು ತಾನೇ ಪ್ರತಿನಿಧಿಸಿದ ಸಮೀರ್ ಕುಲಕರ್ಣಿ, ತನಿಖಾ ಸಂಸ್ಥೆ ಉಚ್ಚ ನ್ಯಾಯಾಲಯದ ಆದೇಶವನ್ನು ಅನುಸರಿಸುತ್ತಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News