ಕಾಂಗ್ರೆಸ್ ಅಧ್ಯಕ್ಷ ಹುದ್ದೆ: ಪ್ರಿಯಾಂಕಾ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್

Update: 2019-07-23 05:13 GMT

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಭೂವ್ಯಾಜ್ಯ ಹಿನ್ನೆಲೆಯಲ್ಲಿ ಹತ್ಯೆಗೀಡಾದ ಬುಡಕಟ್ಟು ಜನಾಂಗದ ಕುಟುಂಬಗಳನ್ನು ಭೇಟಿ ಮಾಡದಂತೆ ತಡೆದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಿಯಾಂಕಾ ಅವರನ್ನು ಸಿನ್ಹಾ ಇಂದಿರಾಗಾಂಧಿಯವರಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಸಮಸ್ಯೆಗೂ ಪ್ರಿಯಾಂಕಾ ಉತ್ತರ, ಆ ಹುದ್ದೆಗೆ ಅವರು ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಿನ್ನೆ/ ಮೊನ್ನೆ ಕಾಂಗ್ರೆಸ್‌ನ ಅತ್ಯಂತ ಜನಪ್ರಿಯ, ದಿಟ್ಟ, ಕ್ರಿಯಾಶೀಲ ನಾಯಕಿ ಪ್ರಿಯಾಂಕಾ ಗಾಂಧಿ ಸೋನ್‌ಭದ್ರ ಹತ್ಯಾಕಾಂಡ ವಿಚಾರದಲ್ಲಿ ಸಕಾಲಿಕವಾಗಿ ಪಾಲ್ಗೊಂಡದ್ದು, ದಿವಂಗತ ನಾಯಕಿ ಇಂದಿರಾ ಅವರನ್ನು ನೆನಪಿಸಿತು. ಬಾಲ್ಯದ ದಿನಗಳಲ್ಲಿ ಅವರು ಆನೆಯ ಮೇಲೆ ಸವಾರಿ ಮಾಡಿದ್ದರು" ಎಂದು ಸಿನ್ಹಾ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬಂಧನದ ಸಮಯದಲ್ಲಿ ಕೂಡಾ ಅವರು ಅದ್ಭುತ ಸಮಚಿತ್ತ ಪ್ರದರ್ಶಿಸಿದರು. ಅವರು ಪಕ್ಷದ ಅಧ್ಯಕ್ಷೆಯಾಗುವ ಮೂಲಕ ಪಕ್ಷ ಮುನ್ನಡೆಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News