ಶಿರಿಬಾಗಿಲು- ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ದುರಸ್ತಿ: ಕೆಲ ರೈಲು ಸಂಚಾರ ರದ್ದು- ಬದಲಾವಣೆ

Update: 2019-07-23 05:23 GMT

ಮಂಗಳೂರು : ಸುಬ್ರಹ್ಮಣ್ಯ ಮತ್ತು ಶಿರಿಬಾಗಿಲು ಘಾಟ್ ಪ್ರದೇಶದ ರೈಲು ಮಾರ್ಗದಲ್ಲಿ ಮಳೆಯಿಂದಾಗಿ ಹಳಿಗೆ ಭಾರೀ ಪ್ರಮಾಣದಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿರುವುದರಿಂದ ಈ ಮಾರ್ಗದಲ್ಲಿ ಮಂಗಳವಾರ ಸಂಚರಿಸುವ ಕೆಲ ರೈಲು ಯಾನವನ್ನು ರದ್ದುಗೊಳಿಸಲಾಗಿದೆ. ಮತ್ತೆ ಕೆಲವು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲು ಇಲಾಖೆಯ ಪ್ರಕಟನೆ ತಿಳಿಸಿದೆ.

ಸಂಚಾರ ರದ್ದುಗೊಳಿಸಲಾದ ರೈಲುಗಳು

ರೆೈಲು ನಂ. 16575 ಯಶವಂತಪುರ- ಮಂಗಳೂರು ಜಂಕ್ಷನ್ ಎಕ್ಸೆಪ್ರೆಸ್- ದಿನಾಂಕ- 23-07-2019.
* ರೈಲು ನಂ. 16585 ಯಶವಂತಪುರ- ಮಂಗಳೂರು ಸೆಂಟ್ರಲ್. ದಿನಾಂಕ- 23-07-2019.
* ರೈಲು ನಂ. 16576-ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್. ದಿನಾಂಕ- 24-07-2019.
* ರೈಲು ನಂ. 16515- ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್. ದಿನಾಂಕ- 24-07-2019.
* ರೈಲು ನಂ. 16586- ಮಂಗಳೂರು ಸೆಂಟ್ರಲ್- ಯಶವಂತಪುರ ಎಕ್ಸ್‌ಪ್ರೆಸ್-ದಿನಾಂಕ 24-07-2019.
* ರೈಲು ನಂ. 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್- ದಿನಾಂಕ 25-07-1029

ಭಾಗಶ: ಸಂಚಾರ ರದ್ದುಗೊಂಡ ರೈಲುಗಳು
* ರೈಲು ನಂ. 16523 ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲು ಮಂಗಳೂರು- ಕಾರವಾರ ನಡುವಿನ ಸಂಚಾರ ಇಂದು ರದ್ದುಗೊಂಡಿದೆ.
* ರೈಲು ನಂ. 16514 ಕಾರವಾರ- ಕೆಎಸ್ಆರ್ ಬೆಂಗಳೂರು ರೈಲು ಕಾರವಾರ- ಮಂಗಳೂರು ನಡುವಿನ ಪ್ರಯಾಣ ಜುಲೈ 24ರಂದು ರದ್ದುಗೊಂಡಿದೆ.
*ರೈಲು ನಂ. 16513 ಕೆಎಸ್‌ಆರ್ ಬೆಂಗಳೂರು ಕಾರವಾರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಕಾರವಾರ ನಡುವಿನ 24ರ ಪ್ರಯಾಣ ರದ್ದುಗೊಂಡಿದೆ.
*ರೈಲು ನಂ. 16524 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕಾರವಾರ ಮತ್ತು ಮಂಗಳೂರು ನಡುವಿನ ಪ್ರಯಾಣವನ್ನು ಜುಲೈ 25ರಂದು ರದ್ದುಗೊಳಿಸಲಾಗಿದೆ.

ಮಾರ್ಗ ಬದಲಿಸಿರುವ ರೈಲು ಸಂಚಾರ
*ರೈಲು ನಂ. 16517/16523 ಕೆಎಸ್‌ಆರ್‌ಬೆಂಗಳೂರು- ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು ಪ್ರಯಾಣವು ಜುಲೈ 23ರಂದು ಮೈಸೂರು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆಯ ಬದಲಿಗೆ ಜೊಲಾರ್‌ಪೆಟ್ಟೈ, ಸೇಲಂ, ಪಾಲ್ಘಾಟಂ, ಶೊರ್ಣೂರು ಮಾರ್ಗವಾಗಿ ಚಲಿಸಲಿದೆ.
* ರೈಲು ನಂ. 16512/16514 ಕಣ್ಣೂರು/ಕಾರವಾರದಿಂದ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವು ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ ಶ್ರವಣಬೆಳಗೊಳದ ಮಾರ್ಗದ ಬದಲಿಗೆ ಇಂದು (ಜು.23) ಶೊರ್ಣೂರು, ಪಾಲ್ಘಾಟ್, ಸೇಲಂ, ಜೊಲರಪೆಟ್ಟೈ ಮಾರ್ಗವಾಗಿ ಸಂಚರಿಸಲಿದೆ.
*ರೈಲು ನಂ. 16511/16513 ಕೆಎಸ್‌ಆರ್ ಬೆಂಗಳೂರು - ಕಣ್ಣೂರು/ರಾಪವಾಪ ರೈಲು ಜು. 24ರಂದು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗದ ಬದಲಿಗೆ ಜೊಲಾರ್‌ಪೆಟ್ಟೈ, ಸೇಲಂ, ಪಾಲ್ಘಾಟ್, ಶೊರ್ಣೂರು ಮಾರ್ಗವಾಗಿ ಚಲಿಸಲಿದೆ.
* ರೈಲು ನಂ. 16512/16514 ಕಣ್ಣೂರು/ ಕಾರವಾರ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ, ಶ್ರವಣಬೆಳಗೊಳ ಮಾರ್ಗದ ಬದಲಿಗೆ, ಜು. 24ರಂದು ಶೊರ್ಣೂರು, ಪಾಲ್ಘಾಟ್, ಸೇಲಂ, ಜೊಲರಪೆಟ್ಟೈ ಮಾರ್ಗವಾಗಿ ಸಂಚರಿಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News