ಪಾದುವ ಕಾಲೇಜಿನಲ್ಲಿ 100 ದಿನದ ರಂಗ ಕಾರ್ಯಗಾರ

Update: 2019-07-23 07:13 GMT

ಮಂಗಳೂರು: ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಡ್ ಮ್ಯಾನೇಜ್ಮೆಂಟ್ ಇದರ ನಾಟಕ ತಂಡವಾದ ಪಾದುವ ರಂಗ ಅಧ್ಯಯನ ಕೇಂದ್ರ ಮಂಗಳೂರಿನ ರಂಗಾಸಕ್ತರಿಗೆ 100 ದಿನದ ರಂಗ ಕಾರ್ಯಗಾರವನ್ನು ಹಮ್ಮಿಕೊಂಡಿದೆ.

ಇದರಲ್ಲಿ ಸುಮಾರು 20 ಮಂದಿ ಆಸಕ್ತ ಯುವ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಗಾರದಲ್ಲಿ ರಂಗಭೂಮಿಯ ನಾನಾ ವಿಷಯಗಳಾದ ರಂಗ‌ ವಿನ್ಯಾಸ, ಬೆಳಕಿನ ವಿನ್ಯಾಸ, ಪ್ರಸಾಧನ, ನಟನೆ, ಕಿರು ಪ್ರಹಸನ, ಬೀದಿ ನಾಟಕ ಇತ್ಯಾದಿ ವಿಷಯಗಳ ಮೇಲೆ ಪ್ರಾಯೋಗಿಕವಾದ ಜ್ಞಾನವನ್ನು ನಾನಾ ಪರಿಣತ ರಂಗಕರ್ಮಿಗಳು ಹಂಚಲಿದ್ದಾರೆ. 

ಹಲವು ಪ್ರಾತ್ಯಕ್ಷಿಕೆಗಳ ಪ್ರಯೋಗವು ಈ ಶಿಬಿರದಲ್ಲಿ ನಡೆಯಲಿದ್ದು, ಇಂತಹ ಶಿಬಿರ ಮಂಗಳೂರಿಗೆ ಅತ್ಯಂತ ಅಗತ್ಯವಾಗಿದ್ದು, ಇದನ್ನು ಆಯೋಜಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಅಭಿಪ್ರಾಯಪಟ್ಟರು.

ಮೂರು ತಿಂಗಳ ಅಂತ್ಯಕ್ಕೆ ಒಂದು ಕನ್ನಡ ನಾಟಕದ ತಯಾರಿಯೂ ಈ ಶಿಬಿರದಲ್ಲಿ ನಡೆಯಲಿದ್ದು, ನಾನಾ ಕಡೆ ಅದರ ಪ್ರದರ್ಶನಗಳು ಏರ್ಪಡಿಸುವ ಆಲೋಚನೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಶಿಬಿರವನ್ನು ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಹಾಗೂ ಲೋಗೋಸ್ ಥಿಯೇಟರ್ ಟ್ರೂಪ್ ಇವುಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News