ವಿಧಾನ ಸಭೆ ಕಲಾಪಕ್ಕೆ ಅಡ್ಡಿ: ಮೂವರು ಶಾಸಕರ ಅಮಾನತು

Update: 2019-07-23 15:47 GMT

ವಾರಣಾಸಿ, ಜು. 23: ಸದನದಲ್ಲಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ಆಂಧ್ರಪ್ರದೇಶ ವಿಧಾನ ಸಭೆಯಿಂದ ಪ್ರತಿಪಕ್ಷ ಟಿಡಿಎಸ್‌ನ ಮೂವರು ಶಾಸಕರನ್ನು ಅಮಾನತುಗೊಳಿಸಲಾಗಿದೆ.

ವಿಧಾನ ಸಭೆಯಲ್ಲಿ ಪ್ರತಿಪಕ್ಷವಾದ ಟಿಡಿಪಿಯ ಕೆ. ಅಟ್ಚನ್ನೈಡು, ಗೋಲಾಂಟ್ಲ ಬುಚ್ಚೆಯ್ಯ ಚೌಧರಿ ಹಾಗೂ ನಿಮ್ಮಾಲ ರಾಮ್ಮನ್ನಾಯ್ಡುವನ್ನು ಉಳಿದ ಬಜೆಟ್ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಬಿಸಿ, ಎಸ್.ಸಿ., ಎಸ್.ಟಿ. ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರಿಗೆ ಪಿಂಚಣಿ ನೀಡುವುದಕ್ಕೆ ಸರಕಾರದ ಪ್ರತಿಕ್ರಿಯೆಗೆ ಪ್ರತಿಭಟಿಸಿ ಸ್ಪೀಕರ್‌ರ ಕುರ್ಚಿಯನ್ನು ಸುತ್ತುವರಿದ ಹಿನ್ನೆಲೆಯಲ್ಲಿ ಕಾನೂನು ವ್ಯವಹಾರಗಳ ಸಚಿವ ಬುಗ್ಗನ ರಾಜೇಂದ್ರನಾಥ್ ಈ ಮೂವರು ಶಾಸಕರನ್ನು ಅಮಾನತುಗೊಳಿಸಲು ನಿರ್ಣಯ ಮಂಡಿಸಿದರು.

ಈ ಸಮುದಾಯಗಳ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಪಿಂಚಣಿ ನೀಡುವ ವೈಎಸ್‌ಆರ್‌ನ ಭರವಸೆಯನ್ನು ಪ್ರಶ್ನೋತ್ತರ ವೇಳೆಯಲ್ಲಿ ಟಿಡಿಪಿ ಶಾಸಕರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News