ಮಾನವನ ವ್ಯಸನ ದೇಶದ ಅಭಿವೃದ್ಧಿಗೆ ಮಾರಕ: ಹರೀಶ್ ಶೆಟ್ಟಿ

Update: 2019-07-24 12:26 GMT

ಶಿರ್ವ, ಜು.24: ಮದ್ಯ ವ್ಯಸನಿಗಳು ಖರ್ಚು ಮಾಡುವ ಹಣ ನಮ್ಮ ದೇಶದ ವಾರ್ಷಿಕ ಬಜೆಟ್‌ಗಿಂತಲೂ ಅಧಿಕವಾಗಿದೆ. ದೇಶದ ಅಭಿವೃದ್ಧಿ ಯಾಗಲು ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು. ಮಾನವನ ವ್ಯಸನ ಮತ್ತು ಚಟ ಗಳು ದೇಶದ ಅಭಿವೃದ್ಧಿಗೆ ಮಾರಕ ಎಂದು ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಉಡುಪಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಪನಾ ಸಮಿತಿ ಮೂಡುಬೆಳ್ಳೆ ಹಾಗೂ ಮೂಡುಬೆಳ್ಳೆಯ ವಿವಿಧ ಸಾಮಾಜಿಕ ಸೇವಾ ಸಂಘಟನೆಗಳ ಸಹಭಾಗಿತ್ವದಲ್ಲಿ ಮೂಡುಬೆಳ್ಳೆ ಲಯನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 1356ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡುತಿದ್ದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಿಂದ 40ರಷ್ಟು ಮಂದಿ ಮದ್ಯ, ಡ್ರಗ್ಸ್ ಅಮಲು ಸೇವೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪ್ರತೀ ವರ್ಷ ಶೇ.10 ಕ್ಕಿಂತಲೂ ಅಧಿಕ ಯುವ ಸಮೂಹ ಈ ಗುಂಪಿಗೆ ಸೇರ್ಪಡೆಗೊಳ್ಳುತ್ತಿರುವುದು ದೊಡ್ಡ ದುರಂತ. ವ್ಯಸನ ಮತ್ತು ಚಟಗಳನ್ನು ಬಲವಂತ ದಿಂದ ಬಿಡಿಸಲು ಸಾಧ್ಯವಿಲ್ಲ. ಅಂತರಂಗದ ಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದರು.

ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ, ವ್ಯಸನಮುಕ್ತ ಸಮಾಜದ ನಿರ್ಮಾಣವೇ ಯೋಜನೆಯ ಮುಖ್ಯ ಗುರಿಯಾಗಿದ್ದು, ಈ ಶಿಬಿರದಲ್ಲಿ 57 ಶಿಬಿರಾರ್ಥಿಗಳು ನವಜೀವನಕ್ಕೆ ಪಾರ್ದಾರ್ಪೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಗೌರವ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ವಹಿಸಿದ್ದರು. ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತಾ ಸುವರ್ಣ, ಡಾ.ಎಚ್.ಬಿ.ಶೆಟ್ಟಿ ಮೂಡುಬೆಳ್ಳೆ, ಉದ್ಯಮಿ ಮುಕುಂದ ಕಾಮತ್, ಶಿಬಿರ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ಕೆ, ಉಡುಪಿ ಯೋಜನಾಧಿಕಾರಿ ರೋಹಿತ್ ಎಚ್., ಶಿಬಿರಾಧಿಕಾರಿ ದೇವಿಪ್ರಸಾದ್, ಸಮು ದಾಯ ಅಭಿವೃದ್ಧಿ ವಿಭಾಗದ ಶ್ರೀಹರಿ, ಶಿರ್ವ ಗ್ರಾಪಂ ಸದಸ್ಯ ಕೆ.ಆರ್. ಪಾಟ್ಕರ್ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳ ಪರವಾಗಿ ಅಜಿತ್ ಮಾತನಾಡಿದರು. ಮೇಲ್ವಿಚಾರಕಿ ಪವಿತ್ರಾ ವಂದಿಸಿದರು. ಮೇಲ್ವಿಚಾರಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News