ಚಂದ್ರಯಾನ-2: ಕಕ್ಷೆ ಮೇಲೇರಿಸುವ ಪ್ರಕ್ರಿಯೆ ಯಶಸ್ವಿ

Update: 2019-07-24 17:41 GMT

ಬೆಂಗಳೂರು, ಜು.24: ಚಂದ್ರಯಾನ-2 ಗಗನನೌಕೆಯನ್ನು ಕಕ್ಷೆಯಿಂದ ಮೇಲೇರಿಸುವ ಪ್ರಥಮ ಪ್ರಕ್ರಿಯೆ ಬುಧವಾರ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಪರಾಹ್ನ 2.52ಕ್ಕೆ ಗಗನನೌಕೆಯಲ್ಲಿರುವ ಮುಂದೂಡುವಿಕೆ ವ್ಯವಸ್ಥೆಯನ್ನು ಬಳಸಿ, ಚಂದ್ರಯಾನ ಗಗನನೌಕೆ ಭೂಕಕ್ಷೆಗೆ ಸೇರಿದ ಎರಡು ದಿನದ ಬಳಿಕ ಯಶಸ್ವಿಯಾಗಿ ಮೇಲಿನ ಕಕ್ಷೆಗೆ ಎತ್ತರಿಸಲಾಗಿದೆ. ಈಗಿನ ಕಕ್ಷೆ 230 45163 ಕಿ.ಮೀ.ಯಲ್ಲಿದೆ. ಮುಂದಿನ ಕಕ್ಷೆ ಮೇಲಕ್ಕೇರಿಸುವ ಪ್ರಕ್ರಿಯೆ ಜು.26ರಂದು ಬೆಳಿಗ್ಗೆ 1 ಗಂಟೆಗೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಮುಂದಿನ ಕೆಲವು ವಾರ ಹಲವು ಬಾರಿ ಕಕ್ಷೆ ಮೇಲೇರಿಸುವ ಪ್ರಕ್ರಿಯೆ ನಡೆಯಲಿದೆ. ಭೂಕಕ್ಷೆಯಲ್ಲಿ ಸಾಗುವ ಅಂತರಿಕ್ಷ ನೌಕೆ ಅಂತಿಮವಾಗಿ ಸೆ.7ರಂದು ಚಂದ್ರದ ದಕ್ಷಿಣ ಧ್ರುವದಲ್ಲಿ ಆಯ್ಕೆ ಮಾಡಿದ ತಾಣದಲ್ಲಿ ಇಳಿಯಲಿದೆ. ವಿಕ್ರಮ್ ಲ್ಯಾಂಡರ್ ಹಾಗೂ 27 ಕಿ.ಗ್ರಾಂ ತೂಕದ ಪ್ರಜ್ಞಾನ್ ಹೆಸರಿನ ರೋವರ್ ಅನ್ನು ನಭಕ್ಕೆ ಹೊತ್ತೊಯ್ದಿದ್ದು ಚಂದ್ರನ ಮೇಲ್ಮೈ ಮೇಲೆ ಅಡ್ಡಾಡಿ ಮಾಹಿತಿ ಸಂಗ್ರಹಿಸಲು ಈ ಎರಡು ಸಾಧನಗಳು ನೆರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News