ವಿಐಪಿ ಭದ್ರತೆ ಪುನರ್ ಪರಿಶೀಲನೆ: 1300 ಭದ್ರತಾ ಸಿಬ್ಬಂದಿ ಕರ್ತವ್ಯದಿಂದ ಮುಕ್ತ

Update: 2019-07-24 17:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು. 24: ದೇಶಾದ್ಯಂತದ ಹಲವು ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ವಿಐಪಿ ಭದ್ರತೆಯನ್ನು ಕೇಂದ್ರ ಸರಕಾರ ಹಿಂದೆಗೆದ ಬಳಿಕ 1,300 ಕಮಾಂಡೊಗಳು ಈ ವಿಐಪಿ ಭದ್ರತಾ ಕರ್ತವ್ಯದಿಂದ ಮುಕ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 350 ವಿಐಪಿಗಳು ಹಾಗೂ ಗಣ್ಯರ ಕುರಿತ ಸಮಗ್ರ ಭದ್ರತಾ ಪುನರ್ ಪರಿಶೀಲನೆಯನ್ನು ಕೇಂದ್ರ ಗೃಹ ಸಚಿವಾಲಯ ಕಳೆದ ವಾರದ ಆರಂಭದಲ್ಲಿ ನಡೆಸಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಪರಿಶೀಲನೆಯ ಬಳಿಕ ಸಿಆರ್‌ಪಿಎಪ್, ಸಿಐಎಸ್‌ಎಪ್, ಎನ್‌ಎಸ್‌ಜಿ ಹಾಗೂ ದಿಲ್ಲಿ ಪೊಲೀಸ್‌ನ 1,300ಕ್ಕೂ ಅಧಿಕ ಸಿಬ್ಬಂದಿ ವಿಐಪಿ ಭದ್ರತಾ ಕರ್ತವ್ಯದಿಂದ ಮುಕ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವಿಐಪಿ ಭದ್ರತೆಯ ‘ಕೇಂದ್ರ ಪಟ್ಟಿ’ಯಲ್ಲಿ ಸ್ಥಾನ ಕಳೆದುಕೊಂಡ ಹಲವರಿಗೆ ರಾಜ್ಯ ಪೊಲೀಸರ ರಕ್ಷಣೆ ನೀಡಲಾಗಿದೆ. ನಿರ್ದಿಷ್ಟ ಪ್ರಕರಣಗಳಲ್ಲಿ ಭದ್ರತೆ ಬೇಕಾದವರು ದಿಲ್ಲಿಯಲ್ಲಿದ್ದರೆ, ದಿಲ್ಲಿ ಪೊಲೀಸರು ಅವರ ಭದ್ರತೆ ನೋಡಿಕೊಳ್ಳುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News