ಬ್ರಿಟನ್ ನೂತನ ಸಚಿವ ಸಂಪುಟದಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿಯ ಅಳಿಯ ರಿಷಿ ಸುನಕ್

Update: 2019-07-25 08:48 GMT

ಲಂಡನ್, ಜು.25: ಇಂದು ಬ್ರಿಟನ್ ದೇಶದ ನೂತನ ಪ್ರಧಾನಿಯಾಗಿ ತೆರೆಸಾ ಮೇ ಅವರಿಂದ ಅಧಿಕಾರ ವಹಿಸಿಕೊಳ್ಳುತ್ತಿರುವ ಬೋರಿಸ್ ಜಾನ್ಸನ್ ಅವರ ಸಚಿವ ಸಂಪುಟದಲ್ಲಿ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸಹಿತ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ.

ರಿಷಿ ಸುನಕ್ ಹೊರತಾಗಿ ಅಲೋಕ್ ವರ್ಮ ಹಾಗೂ ಪ್ರೀತಿ ಪಟೇಲ್ ಕೂಡ ನೂತನ ಸಂಪುಟದಲ್ಲಿ ಸ್ಥಾನ ಗಳಿಸಿದ್ದಾರೆ.

ಮೂವತ್ತೆಂಟು ವರ್ಷದ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದು, ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬ್ರೆಕ್ಸಿಟ್ ಪರ ಅಭಿಯಾನಕಾರರಾಗಿರುವ ಅವರು ಈಗ ಲಿರ್ ಟ್ರುಸ್ಸ್ ಅವರ ಸ್ಥಾನದಲ್ಲಿ ಟ್ರೆಶರಿ ವಿಭಾಗದ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.

ಇಂಗ್ಲೆಂಡ್ ನಲ್ಲಿ ಹುಟ್ಟಿದ ಸುನಕ್ ಆಕ್ಸ್‌ಫರ್ಡ್ ವಿವಿ ಹಾಗೂ ಸ್ಟ್ಯಾನ್‌ಫೋರ್ಡ್ ಎಂಬಿಎ ಪದವೀಧರರಾಗಿದ್ದಾರೆ. ಕಳೆದ ವರ್ಷ ತೆರೆಸಾ ಮೇ ಸರಕಾರದಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಗೃಹ, ಸಮುದಾಯ ಮತ್ತು ಸ್ಥಳೀಯಾಡಳಿತ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News