ಸುದ್ದಿ ತುಣುಕು ಓದಬೇಡಿ, ಪತ್ರಿಕೆ ಹೆಸರು ಹೇಳಬೇಡಿ: ಕಾನೂನು ಸಚಿವರಿಗೆ ಸ್ಪೀಕರ್ ಸೂಚನೆ

Update: 2019-07-25 17:49 GMT

ಹೊಸದಿಲ್ಲಿ, ಜು. 25: ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತ್ರಿವಳಿ ತಲಾಕ್ ಮಸೂದೆಯನ್ನು ಪರಿಗಣನೆಗೆ ಮಂಡಿಸಿದಾಗ ಸ್ಪೀಕರ್ ಓಂ ಬಿರ್ಲಾ, ಸುದ್ದಿ ತುಣುಕುಗಳನ್ನು ಓದಬೇಡಿ. ತುರ್ತು ತ್ರಿವಳಿ ತಲಾಕ್ ನಿದರ್ಶನವನ್ನು ಉಲ್ಲೇಖಿಸುವಾಗ ಪತ್ರಿಕೆಯ ಹೆಸರು ಹೇಳಬೇಡಿ ಎಂದು ತಿಳಿಸಿದರು.

 ಪರಿಗಣನೆಗೆ ಮಸೂದೆ ಮಂಡಿಸಿದಾಗ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಕ್ ಹಾಗೂ ತಲಾಕ್ ಎ ಬಿದ್ದತ್ ಮೂಲಕ ಮಹಿಳೆಯರಿಗೆ ವಿಚ್ಛೇದನ ನೀಡುವ ಆಚರಣೆಯನ್ನು ಸುಪ್ರೀಂ ಕೋರ್ಟ್ 2017 ಆಗಸ್ಟ್‌ನಲ್ಲಿ ರದ್ದುಪಡಿಸಿದ ಹೊರತಾಗಿಯೂ ಲಿಂಗ ಸಮಾನತೆ ಹಾಗೂ ನ್ಯಾಯಕ್ಕಾಗಿ ಈ ಮಸೂದೆ ಅಗತ್ಯವಾಗಿತ್ತು ಎಂದರು. 2017 ಜನವರಿಯಿಂದ 574 ಇಂತಹ ಪ್ರಕರಣಗಳು ಮಾದ್ಯಮಗಳಲ್ಲಿ ವರದಿಯಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ಮಹಿಳೆಯರಿಗೆ ಯಾವ್ಯಾವ ನೆಲೆಯಲ್ಲಿ ತ್ರಿವಳಿ ತಲಾಕ್ ನೀಡಲಾಗಿದೆ ಎಂಬ ಸುದ್ದಿಯ ತುಣುಕುಗಳನ್ನು ರವಿಶಂಕರ್ ಪ್ರಸಾದ್ ಓದುತ್ತಿದ್ದಂತೆ ಬಿರ್ಲಾ ಅವರು, ಸುದ್ದಿ ತುಣುಕುಗಳನ್ನು ಓದಬೇಡಿ ಎಂದರು. ಸುದ್ದಿಯನ್ನು ಉಲ್ಲೇಖಿಸುವಾಗ ಸಚಿವರು ರಾಷ್ಟ್ರೀಯ ದಿನಪತ್ರಿಕೆಯ ಹೆಸರು ಹೇಳಿದರು. ಈ ಸಂದರ್ಭ ಓಂ ಬಿರ್ಲಾ, ಮುಖ್ಯಾಂಶಗಳನ್ನು ಹೇಳುವ ಸಂದರ್ಭ ದಿನಪತ್ರಿಕೆಯ ಹೆಸರು ಹೇಳಬೇಡಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News